ಹೈದರಾಬಾದ್: ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಆನ್ಲೈನ್ ಮೂಲಕ ಹಣ ಲೂಟಿ ಮಾಡುವ ಜಾಲ ಪತ್ತೆಯಾಗುತ್ತಿದೆ. ಕೆಲ ದಿನಗಳ ಹಿಂದೆ ನಟಿ ಅನಸೂಯ ಭಾರಧ್ವಜ್ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಿದ ಘಟನೆ ನಡೆದಿತ್ತು.
ಇದೀಗ ಮತ್ತೊಂದು ಟಾಲಿವುಡ್ ನ ಯುವ ನಟಿಗೆ ಇಂಥದ್ದೇ ಸಂಕಷ್ಟ ಎದುರಾಗಿದೆ. ʼಕಲರ್ ಫೋಟೋʼ ಸಿನಿಮಾದಿಂದ ನಾಯಕಿಯಾಗಿ ಬಂದ ಚಾಂದಿನಿ ಚೌಧರಿ ಅವರು ಸೋಶಿಯಲ್ ಮೀಡಿಯಾದಲ್ಲಿ ತನಗೆ ಕಿರುಕುಳ ನೀಡುವವರ ಬಗ್ಗೆ ಹೇಳಿದ್ದಾರೆ.
ಕಳೆದ ಕೆಲ ಸಮಯದಿಂದ ನನ್ನ ಹೆಸರು ಬಳಸಿಕೊಂಡು ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳಿಂದ ವಾಟ್ಸಪ್ ಗೆ ಮೆಸೇಜ್ ಮಾಡಿ, ವೈಯಕ್ತಿಕವಾದ ಮಾಹಿತಿಯನ್ನು ಕೇಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ನನಗೂ ಕಿರುಕುಳ ನೀಡುತ್ತಿದ್ದಾರೆ. ನನ್ನ ಸಹ ನಟರ ಫೋಟೋ ಹಾಗೂ ಹೆಸರು ಬಳಿಸಿಕೊಂಡು ಹಣ ಕೀಳುತ್ತಿದ್ದಾರೆ ಎಂದಿದ್ದಾರೆ.
ಯಾರೂ ಕೂಡ ನಿಮ್ಮ ವೈಯಕ್ತಿಕ ವಿಷಯಗಳನ್ನು ಇಂಥದ್ದಕ್ಕೆ ಮರಳಾಗಬೇಡಿ ಎಚ್ಚರಿಕೆಯಿಂದ ಇರಿ ಎಂದು ವಂಚಕರು ಮಾಡಿದ ಕೆಲ ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.