Advertisement

‘ಧಮ್’ ಎಳೆದ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್  

02:45 PM Aug 05, 2021 | Team Udayavani |

ಬೆಂಗಳೂರು : ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಆಶಿಕಾ ರಂಗನಾಥ್ ಅವರಿಗೆ ಮದಗಜ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ. ಈ ಸಿನಿಮಾದಲ್ಲಿಯ ಸ್ಯಾಂಡಲ್​ ವುಡ್ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಅವರು ಜಬರ್ದಸ್ತ್ ಲುಕ್ ರಿಲೀಸ್ ಮಾಡಿದೆ.

Advertisement

ಸದ್ಯ ಬಿಡುಗಡೆಯಾಗಿರುವ ಲುಕ್ ಖಡಕ್ ಆಗಿದೆ. ಈ ಫೋಟೊದಲ್ಲಿ ಆಶಿಕಾ ಧಮ್ ಹೊಡೆದಿದ್ದಾರೆ. ಈ ಲುಕ್ ನೋಡುತ್ತಿದ್ದರೆ ಮದಗಜ ಚಿತ್ರದಲ್ಲಿ ಈ ನಟಿಯ ಪಾತ್ರದ ಬಗ್ಗೆ ಕುತೂಹಲ ಹೆಚ್ಚುತ್ತಿದೆ.

ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಾಯಕನಟರಾಗಿ ಅಭಿನಯಿಸುತ್ತಿರುವ ‘ಮದಗಜ’ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿ ನಟಿಸುತ್ತಿದ್ದಾರೆ. ಎಸ್. ಮಹೇಶ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಬಂಡವಾಳ ಹೂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷ ಬೆಳ್ಳಿ ಪರದೆ ಮೇಲೆ ಮದಗಜ ‍ಘೀಳಿಡುವ ಸಾಧ್ಯತೆ ಇದೆ.

ಇನ್ನು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವ ಆಶಿಕಾ, ತಮ್ಮ ವಿಶಿಷ್ಟ ಅಭಿನಯದಿಂದ ಕನ್ನಡಿಗರ ಮನೆಮಾತಾಗಿದ್ದಾರೆ. ಚುಟು ಚುಟು ಹುಡುಗಿಯಾಗಿ, ರ‍್ಯಾಂಬೋ ಬೆಡಗಿಯಾಗಿ ಆಶಿಕಾ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ತಮ್ಮ ಸಿನಿಪಯಣವನ್ನು ಆರಂಭಿಸಿದರು.

ಸದ್ಯ ನಟಿ ಆಶಿಕಾ ರಂಗನಾಥ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಗರುಡ, ರಂಗಮಂದಿರ, ಅವತಾರ ಪುರುಷ ಮತ್ತು ರೇಮೋ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇನ್ನು ಕೆಲ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಐಟಂ ಸಾಂಗ್ ನಲ್ಲಿಯೂ ಅವರು ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next