Advertisement

Breaking news : ಸಿಸಿಬಿ ಚಾರ್ಜ್ ಶಿಟ್‍ ಬಗ್ಗೆ ನಿರೂಪಕಿ ಅನುಶ್ರೀ ಹೇಳಿದ್ದೇನು ?

08:00 PM Sep 09, 2021 | Team Udayavani |

ಬೆಂಗಳೂರು:  ಸಿಸಿಬಿ ಸಲ್ಲಿಸಿರುವ ಚಾರ್ಜ್ ಶಿಟ್ ನಲ್ಲಿ ಕಿಶೋರ್ ಶೆಟ್ಟಿ ಹೇಳಿಕೆ ಆಧರಿಸಿ ತಮ್ಮ ಹೆಸರು ಉಲ್ಲೇಖಗೊಂಡಿರುವ ಬಗ್ಗೆ ನಟಿ ಹಾಗೂ ನಿರೂಪಕಿ ಅನುಶ್ರೀ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇಂದು  (ಸೆ.09) ಸಂಜೆ ನಗರದಲ್ಲಿ ಮಾಧ್ಯಮಗಳ ಎದುರು ಮಾತನಾಡಿದ ಅವರು, ನನ್ನ ಮೇಲೆ ನೂರು ಆರೋಪಗಳು ಇವೆ, ಅವೆಲ್ಲವೂ ಸತ್ಯವಾಗುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಪಷ್ಟನೆ ನೀಡಿದರು.

ಖಾಸಗಿ ಕೆಲಸದ ನಿಮಿತ್ತ ಬಾಂಬೆಗೆ ಹೋಗಿದ್ದೆ. ಟಿವಿಗಳಲ್ಲಿ ನನ್ನ ಬಗ್ಗೆ ಸುದ್ದಿ ಬರುವ ಮುಂಚೆಯೇ ಅಂದರೆ ಸೋಮವಾರವೇ ನಾನು ಬಾಂಬೆಗೆ ಟಿಕೆಟ್ (ರಿಟರ್ನ್ ಕೂಡ) ಬುಕ್ ಮಾಡಿದ್ದೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಮುಂದೆ ಹೋಗುವುದು ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದರು.

ಕಿಶೋರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅನುಶ್ರೀ, ಆ ಆರೋಪಿಗಳು ಸಾವಿರ ಹೇಳುತ್ತಾರೆ. ನಾನು ಕೂಡ ಏನ ಬೇಕಾದ್ದನ್ನು ಹೇಳಬಹುದು. ಆದರೆ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಪೊಲೀಸರು ಪರಿಶೀಲನೆ ಮಾಡುತ್ತಾರೆ ಎಂದರು.

ಡ್ರಗ್ಸ್ ಸೇವನೆ ಆರೋಪದಲ್ಲಿ ನನ್ನನ್ನು ವಿಚಾರಣೆಗೆ ಕರೆದಿರಲಿಲ್ಲ. ಅದರ ಬದಲಾಗಿ ಬಂಧಿತ ವ್ಯಕ್ತಿಗಳ ಪರಿಚಯ ನನಗಿದೆಯೇ ಎಂಬುದರ ಬಗ್ಗೆ ಅಷ್ಟೇ ನೋಟಿಸ್ ನೀಡಿದ್ದರು. ಅದಕ್ಕೆ ನಾನು ಉತ್ತರಿಸಿ ಬಂದಿದ್ದೇನೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಅವುಗಳನ್ನು ನಿಮ್ಮ ಮುಂದೆ ಬಹಿರಂಗ ಪಡಿಸಲು ಆಗುವುದಿಲ್ಲ ಎಂದರು.

Advertisement

ಕೋಟ್ಯಂತರ ರೂ. ಆಸ್ತಿ ಹೊಂದಿರುವ ಬಗ್ಗೆ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಶ್ರೀ, ಅದೆಲ್ಲ ಸುಳ್ಳು. ಕಳೆದ ಮೂರು ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಇದಕ್ಕೆ ನಾನು ಕಟ್ಟುತ್ತಿರುವ ಬಾಡಿಗೆ ಕುರಿತು ಮನೆ ಮಾಲೀಕರ ಬಳಿಯೇ ಕೇಳಿ. ಇನ್ನು ಮಂಗಳೂರಿನಲ್ಲಿ ನಾನು ಸ್ವಂತ ದುಡಿದ ಹಣದಲ್ಲಿ ಮನೆ ಕಟ್ಟಿದ್ದೇನೆ. ಅದಕ್ಕೆ ಕಾಂಪೌಂಡ್ ಕೂಡ ಇಲ್ಲ. ಲೋನ್ ಮೇಲೆ ಹಣ ತೆಗೆದಿದ್ದೇನೆ. ನೀವು ಆ ಮನೆಗೆ ಹೋಗಿ ನೋಡಿಕೊಂಡು ಬನ್ನಿ ಅದರ ಮೌಲ್ಯ ಎಷ್ಟು ಎಂದರು.

ಸಿಸಿಬಿ ಚಾರ್ಜ್ ಶಿಟ್ ಬಗ್ಗೆ ನನಗೆ ಗೊತ್ತಿಲ್ಲ. ಇತ್ತೀಚಿಗೆ ನಡೆದ ಬೆಳವಣೆಗೆ ಬಗ್ಗೆ ನನಗೆ ನಿಜಕ್ಕೂ ಬೇಸರ ಇದೆ. ತರುಣ್ ಹಾಗೂ ನನ್ನ ನಡುವೆ ಫ್ರೆಂಡ್ ಶಿಪ್ ಇಲ್ಲ. ಕಳೆದ 12 ವರ್ಷಗಳ ಹಿಂದೆ ನಾನು ಸ್ಪರ್ಧಿಸಿದ್ದ ಕಾರ್ಯಕ್ರಮದಲ್ಲಿ ಅವರು ಕೊರಿಯೋಗ್ರಾಫ್ ಅಗಿದ್ದರು ಅಷ್ಟೇ. ಶೋ ಮುಗಿದ ಮೇಲೆ ನನಗೆ ಅವರಿಗೆ ಟಚ್ ಇರಲಿಲ್ಲ. ಕಳೆದ 5 ವರ್ಷಗಳ ಹಿಂದೆ ಅವರು ಮಂಗಳೂರಿನಲ್ಲಿ ತೆರೆದ ಡಾನ್ಸ್ ಕ್ಲಾಸ್ ಉದ್ಘಾಟನೆಗೆ ಹೋಗಿದ್ದೇ ಅಷ್ಟೆ. ಅದನ್ನು ಬಿಟ್ಟರೆ ನಾನು ಅವರು ನೀವು ತಿಳಿದುಕೊಂಡಷ್ಟ ಕ್ಲೋಸ್ ಫ್ರೆಂಡ್ಸ್ ಅಲ್ಲ ಎಂದರು.

ಡ್ರಗ್ಸ್ ಕೇಸ್ ನಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅನುಶ್ರೀ, ಇಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಂದ ನನ್ನ 60 ವರ್ಷ ವಯಸ್ಸಿನ ತಾಯಿಯ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ನಾನು ಖಂಡಿತ ಯಾವನನ್ನೂ ಸುಮ್ಮನೆ ಬಿಡೋಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next