ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಂತಿ ನಿಧನಕ್ಕೆ ಅವರ ಮಾಜಿ ಸೊಸೆ, ಖ್ಯಾತ ನಟಿ ಅನುಪ್ರಭಾಕರ್ ಕಂಬಿನಿ ಮಿಡಿದಿದ್ದಾರೆ. ಟ್ವಿಟರಿನಲ್ಲಿ ಸಂತಾಪ ಸೂಚಿಸಿರುವ ಅನು ಭಾವುಕ ನುಡಿಗಳನ್ನಾಡಿದ್ದಾರೆ.
‘ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ತನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ ಅಮ್ಮ ಎಂದು ಭಾವುಕ ಮಾತುಗಳನ್ನಾಡಿದ್ದಾರೆ.
‘’ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ Mom. ನಿಮ್ಮಿಂದ ಕಲೆತ ಜೀವನದ ಪಾಠಗಳು ನಾನು ಎಂದು ಮರೆಯೋಲ್ಲ ಎಂದಿರುವ ಅನು, ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದ ಬಗ್ಗೆ ಎಷ್ಟೋ ಸಾರಿ ನನ್ನ ಹತ್ತಿರ ಮಾತಾಡಿದ್ರಿ .ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ . ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದಿದ್ದಾರೆ.
ನಟಿ ಅನು ಪ್ರಭಾಕರ್ ಅವರು 2002ರಲ್ಲಿ ಜಯಂತಿ ಪುತ್ರ ಕೃಷ್ಣ ಕುಮಾರ್ ಅವರನ್ನು ವಿವಾಹವಾಗಿದ್ದರು. ಆದರೆ ಇವರ ದಾಂಪತ್ಯ 2014ರಲ್ಲಿ ಮುರಿದು ಬಿತ್ತು. ಕೃಷ್ಣ ಕುಮಾರ್ ಅವರಿಂದ ವಿಚ್ಛೇದನ ಪಡೆದ ಅನುಪ್ರಭಾಕರ್ ಬಳಿಕ 2016ರಲ್ಲಿ ನಟ ರಘು ಮುಖರ್ಜಿ ಜೊತೆ ಎರಡನೇ ವಿವಾಹವಾದರು.