“ಹೃದಯಾ ಹೃದಯಾ’ ಚಿತ್ರದ ಮೂಲಕ ಯಾಗಿ ಪರಿಚಯವಾದ ಅಚ್ಚ ಕನ್ನಡತಿ ಅನು ಪ್ರಭಾಕರ್ ನಂತರ ಸ್ನೇಹಲೋಕ, ಶ್ರೀರಸ್ತು ಶುಭಮಸ್ತು ಮೊದಲಾದ ಹಿಟ್ ಚಿತ್ರಗಳ ಮೂಲಕ ಚಂದನವನದಲ್ಲಿ ಗಟ್ಟಿಯಾಗಿ ನೆಲೆಕಂಡುಕೊಂಡ ನಟಿ. ವೃತ್ತಿ ಜೀವನದಲ್ಲಿ ಸಾಕಷ್ಟು ಬ್ಯುಸಿಯಾಗಿರುವಾಗಲೇ, ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಆ ನಂತರ ತನಗೆ ತಕ್ಕ ಪಾತ್ರಗಳು ಸಿಗಲಿಲ್ಲ ಎಂದು ಸಿನಿಮಾದಿಂದ ದೂರ ಉಳಿದರೆ, ನಂತರ ಸಂಸಾರ, ಮಕ್ಕಳ ಜವಾಬ್ದಾರಿಯ ಕಾರಣ ನಟನೆಗೆ ಕೆಲವು ವರ್ಷಗಳ ಬಿಡುವು ನೀಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದಲ್ಲಿ ಅನು ಪ್ರಭಾಕರ್ ನಟನೆಯಲ್ಲಿ ತೊಡಗಿಸಿಕೊಂಡಿ¨ªಾರೆ. ಕಳೆದ ವರ್ಷ ಅನುಕ್ತ ಚಿತ್ರದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಅನು ಪ್ರಭಾಕರ್, ಈ ವರ್ಷ ಕಾದಂಬರಿ ಆಧರಿತ ಚಿತ್ರ ಸಾರಾವಜ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಲೇಖಕಿ ಸಾರಾ ಅಬೂಬಕರ್ ಅವರ “ವಜ್ರಗಳು’ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಸಿನಿಮಾಗೆ “ಸಾರಾವಜ್ರ’ ಎಂದು ಹೆಸರಿಡಲಾಗಿದೆ. ಈಗಾಗಲೇ ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
ಇನ್ನು “ಸಾರಾವಜ್ರ’ ಚಿತ್ರದಲ್ಲಿ ಅನು ಪ್ರಭಾಕರ್ ಅವರದ್ದು “ನಫೀಜಾ’ ಎನ್ನುವ ಮುಸ್ಲಿಂ ಮಹಿಳೆಯ ಪಾತ್ರವಂತೆ. ಚಿತ್ರದ ಕುರಿತು ಮಾತನಾಡಿರುವ ಅನು ಪ್ರಭಾಕರ್, “ಖ್ಯಾತ ಲೇಖಕಿಯ ಕಾದಂಬರಿಯ ಕಥಾವಸ್ತುವಿಗೆ ನಟನೆಯ ಮೂಲಕ ನ್ಯಾಯ ಸಲ್ಲಿಸಲು ಸಾಧ್ಯವೇ ಎನ್ನುವ ಅಳುಕು ಆರಂಭದಲ್ಲಿತ್ತು. ಆದರೆ ಇಂತಹ ಪಾತ್ರವೊಂದು ವೃತ್ತಿ ಬದುಕಿನಲ್ಲಿ ಸಿಗುತ್ತಿರುವುದು ಸೌಭಾಗ್ಯ. ಹೀಗಾಗಿ ಪಾತ್ರ ಒಪ್ಪಿಕೊಂಡೆ’ ಎನ್ನುತ್ತಾರೆ. ನಟ, ನಿರೂಪಕ ರೆಹಮಾನ್ ಹಾಸನ್, ಹಿರಿಯ ನಟ ರಮೇಶ್ ಭಟ್ ಮೊದಲಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಒಟ್ಟಾರೆ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಬಳಿಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಲ್ಲಿ ಸುಮಾರು 50ಕ್ಕೂ ಚಿತ್ರಗಳಲ್ಲಿ ನಟಿಸಿ ಇತ್ತೀಚಿನ ವರ್ಷಗಳಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‌ವುಡ್‌ಗೆ ಹೊಸ ಜೋಶ್‌ನಲ್ಲಿ ರೀ-ಎಂಟ್ರಿ ಕೊಡುತ್ತಿದ್ದಾರೆ.