Advertisement

Shivanna 131: ಶಿವರಾಜ್ ಕುಮಾರ್ ಶೂಟಿಂಗ್‌ ಸೆಟ್‌ಗೆ ನಟ ಯಶ್‌ ಭೇಟಿ; ಫೋಟೋಸ್ ವೈರಲ್

03:14 PM Aug 19, 2024 | Team Udayavani |

ಬೆಂಗಳೂರು: ಸಾಲು ಸಾಲು ಚಿತ್ರಗಳಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌(Shivaraj Kumar) ಬ್ಯುಸಿಯಾಗಿದ್ದಾರೆ. ತನ್ನ ಮುಂದಿನ ಪ್ರಾಜೆಕ್ಟ್‌ ಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

Advertisement

ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರೊಂದಿಗೆ ಶಿವಣ್ಣ ಅವರ 131ನೇ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಈಗಾಗಲೇ ಸೆಟ್ಟೇರಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ: Kollywood: ರಜಿನಿಕಾಂತ್‌ ʼವೆಟ್ಟೈಯನ್‌ʼ ರಿಲೀಸ್‌ ಡೇಟ್‌ ಔಟ್;‌ ʼಕಂಗುವʼ ಜತೆ ಕ್ಲ್ಯಾಶ್

ಶಿವಣ್ಣ ಅವರ ʼ131ʼ ಸಿನಿಮಾ ಚಿತ್ರೀಕರಣದ ಸೆಟ್‌ ಗೆ ರಾಕಿಂಗ್‌ ಸ್ಟಾರ್‌ ಯಶ್‌(Actor Yash) ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ನಟ ಯಶ್‌ ಶಿವರಾಜ್‌ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಕೈ ಕುಲುಕಿಕೊಂಡು ಕಾಣಿಸಿರುವ ಲುಕ್‌ ಫ್ಯಾನ್ಸ್‌ ವಲಯದಲ್ಲಿ ವೈರಲ್‌ ಆಗಿದೆ. ಶಿವಣ್ಣ ಉದ್ದ ಕೂದಲು ಬಿಟ್ಟು ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಯಶ್‌ ಗಡ್ಡ ಬಿಟ್ಟು ಸ್ಮಾರ್ಟ್‌ ಆಗಿ ಕಾಣಿಸಿದ್ದಾರೆ.

ಯಶ್‌ ಶಿವಣ್ಣ ಅವರ ಸಿನಿಮಾ ಸೆಟ್‌ಗೆ ಭೇಟಿ ನೀಡಿದ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಶಿವಣ್ಣ ಅವರ ಸಿನಿಮಾದಲ್ಲಿ ಯಶ್‌ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಇತ್ತ ಶಿವರಾಜ್‌ ಕುಮಾರ್‌ ಸದ್ಯ ʼಭೈರತಿ ರಣಗಲ್‌ʼ, ಅರ್ಜುನ್‌ ಜನ್ಯ ಅವರ ʼ45ʼ, ‘ಭೈರವನ ಕೊನೆ ಪಾಠʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಯಶ್‌ ʼಟಾಕ್ಸಿಕ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದು,ಇತ್ತ ಶಿವರಾಜ್‌ ಕುಮಾರ್‌ ಸದ್ಯ ʼಭೈರತಿ ರಣಗಲ್‌ʼ, ಅರ್ಜುನ್‌ ಜನ್ಯ ಅವರ ʼ45ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.