ಮೈಸೂರು: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಟ ಯಶ್ ಸಹ ಚುನಾವಣಾ
ಪ್ರಚಾರಕ್ಕಿಳಿ ದಿದ್ದು, ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಎ. ರಾಮದಾಸ್ ಪರವಾಗಿ ಬುಧವಾರ ಬಿರುಸಿನ
ಪ್ರಚಾರ ನಡೆಸಿದರು.
ನಗರದ ಗನ್‌ಹೌಸ್ ಸಮೀಪದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ರ್ಯಾಲಿ ಆರಂಭಿಸಿದ
ರಾಕಿಂಗ್‌ಸ್ಟಾರ್ ಯಶ್, ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಅಗ್ರಹಾರ ವೃತ್ತ, 101 ಗಣಪತಿ ದೇವಸ್ಥಾನ ವೃತ್ತ, ನಂಜುಮಳಿಗೆ ವೃತ್ತ ಮುಂತಾದ ಕಡೆಗಳಲ್ಲಿ ತೆರೆದ ಜೀಪ್‌ನಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಪರ ಮತಯಾಚನೆ ಮಾಡಿದರು. ಇದಕ್ಕೂ ಮುನ್ನ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ ನಟ ಯಶ್ ಅವರಿಗೆ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಅದ್ದೂರಿ ಸ್ವಾಗತ ಕೋರಿದರು. ಈ ನಡುವೆ ರ್ಯಾಲಿ ಆರಂಭವಾಗುತ್ತಿದ್ದಂತೆ ಸುರಿದ ಬಾರೀ ಮಳೆ, ಚುನಾವಣಾ ಪ್ರಚಾರದ ರ್ಯಾಲಿಗೆ ಅಡ್ಡಿಯಾಯಿತು.
ಇದಕ್ಕೂ ಮುನ್ನ ಸುದ್ದಿಗಾರ ರೊಂದಿಗೆ ಮಾತನಾಡಿದ ಯಶ್, ಕೆಲಸ ಮಾಡುವ ಮನಸ್ಸಿರುವವರಿಗೆ ತಾವು ಎಂದಿಗೂ ಬೆಂಬಲ ನೀಡಲಿದ್ದು, ಅವರು ಯಾವುದೇ ಪಕ್ಷದವರಾಗಿ ದ್ದರೂ, ನನಗೆ ಪರಿಚಿತರು ಹಾಗೂ ಸಮಾನ ಮನಸ್ಕರೊಂದಿಗೆ ತೊಡಗಿಸಿ ಕೊಳ್ಳುತ್ತೇನೆ. ಈ ಹಿನ್ನೆಲೆಯಲ್ಲಿ ರಾಮದಾಸ್ ಅವರ ಪರವಾಗಿ ಪ್ರಚಾರದಲ್ಲಿ ಬಾಗಿಯಾಗಿದ್ದು, ರಾಮದಾಸ್ ಅವರು ಮೊದಲಿ ನಿಂದಲೂ ತಮಗೆ ಪರಿಚಯವಿದೆ. ತಮ್ಮ ಕಷ್ಟದ ಸಂದರ್ಭಗಳಲ್ಲೂ ರಾಮ ದಾಸ್ ಅವರು ನನ್ನನ್ನು ಭೇಟಿಯಾಗಿ ದ್ದರು. ಜತೆಗೆ ಅವರು ಮಾಡಿರುವ ಕೆಲಸಗಳ ಬಗ್ಗೆ ತಮಗೆ ಗೌರವವಿದ್ದು, ಅವರ ಕೆಲಸ, ಕನಸುಗಳ ಬಗ್ಗೆ ತಿಳಿದಿದ್ದೇನೆ ಎಂದ ಅವರು, ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ, ಆದರೆ ಅಗತ್ಯಬಿದ್ದಾಗ ಜನಪ್ರತಿನಿಧಿಗಳ ಬಳಿಗೆ ತೆರಳಿ, ಜನಪರ ಕೆಲಸ ಮಾಡುತ್ತೇನೆ ಎಂದರು. ಈ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಪಕ್ಷದ ಮುಖಂಡರು ಹಾಜರಿದ್ದರು.
ನಾನು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ ಹಾಗೂ ಯಾವುದೇ ಸಿದ್ಧಾಂತಗಳಿಗೆ ಸಿಲುಕಿಲ್ಲ. ಹೀಗಾಗಿ ನನ್ನ ಆಸೆಗಳನ್ನು ಈಡೇರಿಸುವ ನಂಬಿಕೆ ಇರುವ ಕಡೆಗಳಿಗೆ ತೆರಳಿ, ವ್ಯಕ್ತಿಗತವಾಗಿ ಪ್ರಚಾರದಲ್ಲಿ ತೊಡಗುತ್ತೇನೆ.
ಯಶ್, ನಟ