Advertisement

ತಮಿಳುನಾಡು ಚುನಾವಣೆ : ಬಿಜೆಪಿ ಮೈತ್ರಿಯಿಂದ ಹೊರ ಬಂದ ಡಿಎಂಡಿಕೆ

04:44 PM Mar 09, 2021 | Team Udayavani |

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದ್ದು, ಚುನಾವಣಾ ಕಣ ರಂಗೇರುತ್ತಿದ್ದೆ. ಇದರ ನಡುವೆ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ನಟ ವಿಜಯಕಾಂತ ನೇತೃತ್ವದ ಡಿಎಂಡಿಕೆ ಪಕ್ಷ ಸೀಟು ಹಂಚಿಕೆ ವಿಚಾರವಾಗಿ ಅಸಮಧಾನ ಮಾಡಿಕೊಂಡು ಮೈತ್ರಿಯಿಂದ ಹೊರ ನಡೆದಿದೆ.

Advertisement

ದೇಸಿಯಾ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ಪಾರ್ಥಸಾರಥಿ ಪ್ರತಿಕ್ರಿಯಿಸಿದ್ದು, 234 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ನಾವು 23 ಸೀಟುಗಳನ್ನು ಕೇಳಿದ್ದೆವು. ಆದ್ರೆ ಕೇವಲ 15 ಕ್ಷೇತ್ರಗಳನ್ನು ಮಾತ್ರ ಕೊಡುವುದಾಗಿ ಹೇಳಿದ್ದು, ಇದರಿಂದ ಅಸಮಧಾನಗೊಂಡು, ಮೈತ್ರಿಯಿಂದ ಹೊರ ಬಂದಿದ್ದೇವೆ ಎಂದರು.

ಬಿಜೆಪಿ ಮಿತ್ರ ಪಕ್ಷವಾಗಿರುವ ಎಐಎಡಿಎಂಕೆ ಪ್ರತಿಕ್ರಿಯೆ ನೀಡಿದ್ದು, ಕೊಟ್ಟಿರುವ ಸೀಟುಗಳನ್ನು ನಿರಾಕರಿಸಿದೆ. ಇದು ದುರದೃಷ್ಟಕರ ಎಂದಿದೆ. ವಿಜಯಕಾಂತ ಮೈತ್ರಿಯಿಂದ ಹೊರ ಬಂದ ಕಾರಣ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.  ಈ ಹಿಂದೆ ತಮಿಳಿನಾಡು ಚುನಾವಣೆಯನ್ನು ಎದುರಿಸಲು ಬಿಜೆಪಿ, ಎಐಎಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು.

ಡಿಎಂಡಿಕೆ ಪಕ್ಷವು 2003 ರಿಂದ ತಮಿಳುನಾಡಿನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು. 2006 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next