Advertisement

ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ ಬಂಕ್ ಸಿಬ್ಬಂದಿ

04:09 PM Aug 11, 2020 | keerthan |

ಶಿವಮೊಗ್ಗ: ಜಿಲ್ಲೆಗೆ ಪ್ರವಾಸಕ್ಕೆಂದು ಕುಟುಂಬದೊಂದಿಗೆ ಬಂದಿದ್ದ ನಟ ವಿಜಯ್ ರಾಘವೇಂದ್ರ ಅವರು ಕಾರಿಗೆ ಇಂಧನ ತುಂಬಿಸಲು ಹೋದಾಗ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲು ಡೀಸೆಲ್ ಹಾಕಿದ ಘಟನೆ ಮಂಗಳವಾರ ನಡೆದಿದೆ.

Advertisement

ನಗರದ ಪ್ರತಿಷ್ಟಿತ ಪೆಟ್ರೋಲ್ ಬಂಕ್ ಒಂದರಲ್ಲಿ ಘಟನೆ ನಡೆದಿದ್ದು, ನಟ ವಿಜಯ್ ರಾಘವೇಂದ್ರ ಅವರು ಜೋಗ ನೋಡಿಕೊಂಡು ವಾಪಸ್ ಬೆಂಗಳೂರಿಗೆ ಹೋಗುವಾಗ ಈ ಅವಾಂತರ ನಡೆದಿದೆ.

ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲು ಡೀಸೆಲ್ ಹಾಕಿದ್ದಾರೆ ಎನ್ನಲಾಗಿದೆ. ನಂತರ ಎಚ್ಚೆತ್ತ ಬಂಕ್ ಸಿಬ್ಬಂದಿ ಹಾಗೂ ಮಾಲೀಕರು ವಿಜಯ್ ರಾಘವೇಂದ್ರ ಬಳಿ ಕ್ಷಮೆ ಯಾಚಿಸಿದರು.

ಕಾರನ್ನು ಲಾರಿಯಲ್ಲಿ ಹಾಕಿ‌ ಸರ್ವೀಸ್ ಗೆ ಕಳುಹಿಸಲಾಗಿದೆ. ವಿಜಯ್ ರಾಘವೇಂದ್ರ‌ ಹಾಗೂ ಕುಟುಂಬದವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next