Advertisement

ಇನ್ಸ್ಟಾಗ್ರಾಮ್‌ಗೆ ಕಾಲಿಟ್ಟ ವಿಜಯ್:‌ ಕೆಲವೇ ಗಂಟೆಗಳಲ್ಲಿ 4 ಮಿಲಿಯನ್‌ ಗೂ ಅಧಿಕ ಫಾಲೋವರ್ಸ್

08:54 AM Apr 03, 2023 | Team Udayavani |

ಚೆನ್ನೈ: ತಮಿಳು ನಟ ʼಮಾಸ್ಟರ್‌ʼ ವಿಜಯ್‌ ಇನ್ಸ್ಟಾಗ್ರಾಮ್‌ ಗೆ ಕಾಲಿಟ್ಟಿದ್ದಾರೆ. ದಳಪತಿ ವಿಜಯ್‌ ಅವರ ಇನ್ಸ್ಟಾ ಖಾತೆಗೆ ಒಂದೇ ದಿನದಲ್ಲಿ ಮಿಲಿಯನ್‌ ಗಟ್ಟಲೇ ಫಾಲೋವರ್ಸ್‌ ಗಳು ಬಂದಿದ್ದಾರೆ.

Advertisement

ʼವಾರಿಸುʼ ವಿಜಯ್‌ ಅವರಿಗೆ ದೊಡ್ಡ ಹಿಟ್‌ ತಂದುಕೊಟ್ಟಿದೆ. ಕೋಟಿಗೂ ಅಧಿಕ ಕಮಾಯಿ ಮಾಡಿದ ಚಿತ್ರದ ಬಳಿಕ ವಿಜಯ್‌ ಈಗ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಟ್ವಟಿರ್‌, ಫೇಸ್‌ ಬುಕ್‌ ನಲ್ಲಿ ಸಕ್ರಿಯವಾಗಿರುವ ವಿಜಯ್‌ ಇದೀಗ ಜನಪ್ರಿಯ ಸೋಶಿಯಲ್‌ ಮೀಡಿಯಾ ಆ್ಯಪ್ ಇನ್ಸ್ಟಾಗ್ರಾಮ್‌ ಗೆ ಕಾಲಿಟ್ಟಿದ್ದಾರೆ.

“ಹಲೋ ನನ್ಬಾಸ್ ಮತ್ತು ನಾನ್ಬಿಸ್” (ಹಲೋ ಸ್ನೇಹಿತರೇ) ಎಂದು ಕಪ್ಪು ಶೂಟ್‌ ಹಾಕಿಕೊಂಡು ಸ್ಟೈಲಿಸ್ಟ್‌ ಆಗಿ ಕಾಣಿಸಿಕೊಂಡಿರುವ ಪೋಟೋವನ್ನು ಹಾಕಿಕೊಂಡಿದ್ದಾರೆ. ಇದರೊಂದಿಗೆ ಚಿತ್ರೀಕರಣ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಸ್ಟೋರಿಯಾಗಿ ಹಾಕಿಕೊಂಡಿದ್ದಾರೆ. ಈ ಪೋಟೋವನ್ನು 4 ಮಿಲಿಯನ್‌ ಗೂ ಅಧಿಕ ಮಂದಿ ಮೆಚ್ಚಿಕೊಂಡಿದ್ದಾರೆ. ವಿಜಯ್‌ ಅವರ ಇನ್ಸ್ಟಾ ಖಾತೆಗೆ ಒಂದೇ ದಿನದಲ್ಲಿ 4 ಮಿಲಿಯನ್‌ ಗೂ ಅಧಿಕ ಫಾಲೋವರ್ಸ್‌ ಬಂದಿದ್ದಾರೆ.

ಸದ್ಯ ವಿಜಯ್‌ ಅವರು ಲೋಕೇಶ್‌ ಕನಕರಾಜ್‌ ಯೂನಿವರ್ಸ್‌ ಸಿನಿಮಾಗಳಲ್ಲಿ ಒಂದಾಗಿರುವ ʼಲಿಯೋʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಅಕ್ಟೋಬರ್‌ 19 ರಂದು ರಿಲೀಸ್‌ ಆಗಲಿದೆ. ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಂಜಯ್‌ ದತ್‌ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next