Advertisement

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

04:18 PM Dec 03, 2022 | Team Udayavani |

ನಟಿ ಹರಿಪ್ರಿಯ ಮತ್ತು ನಟ ವಶಿಷ್ಟ ಸಿಂಹ ವಿವಾಹವಾಗುತ್ತಾರೆ ಎಂಬ ವದಂತಿಗಳ ನಡುವೆಯೇ, ಶುಕ್ರವಾರ ಹರಿಪ್ರಿಯ ಮಾಡಿದ್ದ ಟ್ವೀಟೊಂದು ಹಲವು ಗುಮಾನಿಗಳಿಗೆ ಕಾರಣವಾಗಿತ್ತು. ಸಿಂಹವೊಂದು ಪುಟ್ಟ ಮಗುವನ್ನು ಹಿಡಿದುಕೊಂಡಿರುವ ಚಿತ್ರಕ್ಕೆ “ಚಿನ್ನ ನಿನ್ನ ತೋಳಿನಲಿ ಕಂದ ನಾನು’ ಎಂದು ಶೀರ್ಷಿಕೆ ನೀಡಿದ್ದರು. ಇದು ವಶಿಷ್ಟ ಸಿಂಹ ಅವರ ಬಗ್ಗೆಯೇ ಹೇಳಿದ್ದು ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಇದೀಗ ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

Advertisement

ಹೌದು, ಸ್ವತಃ ವಸಿಷ್ಟ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ಹರಿಪ್ರಿಯಾ ಪೋಸ್ಟ್ ಮಾಡಿದ್ದ ಸಿಂಹದ ಚಿತ್ರವನ್ನೇ ಟ್ವೀಟ್ ಮಾಡಿರುವ ವಸಿಷ್ಟ ಸಿಂಹ, ‘ಎಂದೂ ನಿನ್ನ ನೆರಳಾಗಿ ಕಾಯುವೆ ನಾನು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ಹರಿಪ್ರಿಯಾ ಮತ್ತು ವಸಿಷ್ಟ ಸಿಂಹ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಜೋಡಿ ಎಲ್ಲೂ ಹೇಳಿಕೊಂಡಿಲ್ಲ. ಈ ಜೋಡಿ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next