Advertisement

ಸಿಂಹದ ಮರಿಯನ್ನು ದತ್ತುಪಡೆದ ವಸಿಷ್ಠ ಸಿಂಹ

01:53 PM Jan 02, 2021 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು ಪ್ರಾಣಿ ಪಕ್ಷಿಗಳನ್ನು ದತ್ತುಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಆ ಸಾಲಿನಲ್ಲಿ ಇದೀಗ ನಟ ವಸಿಷ್ಠ ಸಿಂಹ ಕೂಡಾ ಸೇರಿಕೊಂಡಿದ್ದು, ಹೊಸ ವರ್ಷದ ಹಿನ್ನೆಯಲ್ಲಿ ಸಿಂಹದ ಮರಿಯೊಂದನ್ನು ದತ್ತು ಪಡೆದುಕೊಂಡು, ಆ ಸಿಂಹದ ಮರಿಗೆ ತನ್ನ ತಂದೆಯ ಹೆಸರಿಟ್ಟಿದ್ದಾರೆ.

Advertisement

ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿರುವ ಮೂರು ತಿಂಗಳ ಸಿಂಹದ ಮರಿಯೊಂದನ್ನು ದತ್ತು ಪಡೆದಿರುವ ನಟ, ಈ ಸಿಂಹದ ಮರಿಗೆ ತನ್ನ ತಂದೆಯಾದ ‘ವಿಜಯ ನರಸಿಂಹ’ ಅವರ ಹೆಸರನ್ನು ನಾಮಕರಣ  ಮಾಡಿದ್ದಾರೆ.

ಇವರ ಈ ಪ್ರಾಣಿ ಪ್ರೇಮಕ್ಕೆ ಅಭಿಮಾನಿಗಳನ್ನು ಒಳಗೊಂಡಂತೆ ಹಲವಾರು ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ನಟ ವಸಿಷ್ಠ ಸಿಂಹ  ಹೊಸ ವರ್ಷದ ಮೊದಲ ದಿನವನ್ನು ವಿಭಿನ್ನವಾಗಿ ಆಚರಿಸುವ ಆಸೆ ನನ್ನದು. ಮುಂಬರುವ ದಿನಗಳಲ್ಲಿಯೂ ಇಂತಹ ಹಲವಾರು ಉತ್ತಮ ಕಾರ್ಯಗಳನ್ನು ಮಾಡುವ ಗುರಿ ಹೊಂದಿದ್ದೇನೆ. ಇದರ ಮೊದಲ ಹೆಜ್ಜೆಯಾಗಿ ಈ ಸಿಂಹದ ಮರಿಯನ್ನು ದತ್ತುಪಡೆದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:ನಾಟಿ ಕೋಳಿ ಸಾಕಾಣಿಕೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Advertisement

ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಸ್ಯಾಂಡಲ್ ವುಡ್ ನಲ್ಲಿ ಭಾರಿ ಹೆಸರು ಮಾಡುತ್ತಿರುವ ನಟ ವಸಿಷ್ಠ ಸಿಂಹ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡಾ ಮೈಸೂರಿನ ಮೃಗಾಲಯದಲ್ಲಿರುವ ಆನೆಯೊಂದನ್ನು ದತ್ತುಪಡೆದು ‘ಪಾರ್ವತಿ’ ಎಂದು ಹೆಸರಿಟ್ಟಿದ್ದರು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next