ಮುಂಬಯಿ: ನಟಿ ತುನಿಶಾ ಶರ್ಮಾ ಪ್ರಕರಣ ದಿನಕ್ಕೊಂದರಂತೆ ತಿರುವು ಪಡೆದುಕೊಳ್ಳುತ್ತಿದೆ. ನ್ಯಾಯಲಯದಲ್ಲಿ ಸೋಮವಾರ ಎರಡು ಕಡೆಯವರು ತಮ್ಮ ವಾದವನ್ನು ಮಂಡಿಸಿದ್ದಾರೆ. ವಸಾಯಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಡಿ.ದೇಶಪಾಂಡೆ ಎರಡೂ ಕಡೆಯವರ ವಾದವನ್ನು ಆಲಿಸಿದ್ದಾರೆ.
ಶೀಜಾನ್ ಖಾನ್ ಪರ ವಕೀಲರಾಗಿರುವ ಶೈಲೇಂದ್ರ ಮಿಶ್ರಾ ಮತ್ತು ಶರದ್ ರೈ ಅವರು ಕೋರ್ಟಿನ ಮುಂದೆ ಶೀಜಾನ್ ನಿರಪರಾಧಿ ಶರ್ಮಾ ಅವರ ಪ್ರಕರಣದಲ್ಲಿ ಯಾವ ಸಂಬಂಧವನ್ನು ಹೊಂದಿಲ್ಲ. ಬಾಲಿವುಡ್ ನಟ ಸೂರಜ್ ಪಾಂಚೋಲಿ ಕೂಡ 2013 ರಲ್ಲಿ ನಿಧನರಾದ ನಟ-ಗಾಯಕಿ ಜಿಯಾ ಖಾನ್ ಅವರ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದ ನಂತರ ಜಾಮೀನು ಪಡೆದಿದ್ದರು ಎಂದು ಹೇಳಿದ್ದಾರೆ.
ಡೇಟಿಂಗ್ ಅಪ್ಲಿಕೇಶನ್‌ವೊಂದರಲ್ಲಿ ತುನಿಶಾ ಅವರು ಅಲಿ ಎಂಬ ವ್ಯಕ್ತಿಯ ಪರಿಚಯವನ್ನು ಹೊಂದಿದ್ದಳು. ಡಿ.21 -23 ರ ನಡುವೆ ಅಲಿಯೊಂದಿಗೆ ಸಂಪರ್ಕದಲ್ಲಿದ್ದರು. ಇದಲ್ಲದೆ ತುನಿಶಾ ಸಾವಿನ ಮೊದಲು ಅಲಿ ಅವರೊಂದಿಗೆ 15 ನಿಮಿಷದವರೆಗೆ ವಿಡಿಯೋ ಕಾಲ್ ನಲ್ಲಿ ಮಾತಾನಾಡಿದ್ದಳು. ಈ ದೃಷ್ಟಿಕೋನದಲ್ಲಿ ತನಿಖೆಯಾಗಲಿ ಎಂದು ವಕೀಲರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಲವ್ ಜಿಹಾದ್, ಉರ್ದು ಕಲಿಯಲು ಒತ್ತಾಯಿಸಿದ್ದು, ಹಿಜಾಬ್ ಧರಿಸಲು ಹೇಳಿದ್ದೆಲ್ಲಾ ಆಗಿಲ್ಲ ಎಂದು ವಕೀಲರು ವಾದದ ವೇಳೆ ಹೇಳಿದ್ದಾರೆ.
ಶರ್ಮಾ ಕುಟುಂಬದ ಪರ ಹಾಜರಾದ ವಕೀಲ ತರುಣ್ ಶರ್ಮಾ ಅವರು ದಾಖಲೆಗಳನ್ನು ಪರಿಶೀಲಿಸಲು ಮತ್ತು ತಮ್ಮ ವಾದವನ್ನು ಸಿದ್ಧಪಡಿಸಲು ನ್ಯಾಯಾಲಯದಿಂದ ಸಮಯ ಕೋರಿದರು ಅದನ್ನು ನ್ಯಾಯಾಧೀಶರು ಅನುಮತಿಸಿದರು. ವಿಚಾರಣೆಯನ್ನು ಜನವರಿ 11 ಕ್ಕೆ ಮುಂದೂಡಿದ್ದಾರೆ.