Advertisement

ರಾಜಕೀಯ ಎಂಟ್ರಿ ಬಗ್ಗೆ ನಟ ಸೋನು ಸೂದ್ ಏನು ಹೇಳಿದ್ರು ಗೊತ್ತಾ ?

03:59 PM May 12, 2021 | Team Udayavani |

ಮುಂಬೈ:ಕಳೆದ ವರ್ಷ ಕೋವಿಡ್ ಸೋಂಕು ತಡೆಗಟ್ಟಲು ಜಾರಿಯಾದ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಕೆಲಸ ಶುರು ಮಾಡಿದ ಬಾಲಿವುಡ್ ನಟ ಸೋನು ಸೂದ್,ಈ ವರ್ಷವೂ ತನ್ನ ಜನಪರ ಕೆಲಸವನ್ನು ಮುಂದುವರೆಸಿದ್ದಾರೆ.

Advertisement

ಕೋವಿಡ್ ಎರಡನೇ ಅಲೆ ಭೀಕರತೆಯ ಸಮಯದಲ್ಲಿ ಸೋನು ಸೂದ್ ಸೋಂಕಿತರ ನೆರವಿಗೆ ನಿಂತಿದ್ದಾರೆ. ಅಗತ್ಯ ಇದ್ದವರಿಗೆ ಹಣಕಾಸಿನ ಸಹಾಯ, ಬೆಡ್ ಹಾಗೂ ಆಕ್ಸಿಜನ್ ಪೂರೈಸುತ್ತಿದ್ದಾರೆ. ಇವರ ಪರೋಪಕಾರಿ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋನು ಸೂದ್ ಮಾನವೀಯ ಕೆಲಸ ನೋಡಿ ಅಭಿಮಾನಿಗಳು ಇಂಥವರು ದೇಶದ ಪ್ರಧಾನಿಯಾಗಬೇಕು ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ತಾವು ಪ್ರಧಾನಿಯಾಗಬೇಕೆಂದು ಅಭಿಮಾನಿಗಳು ಬಯುತ್ತಿರುವುದಕ್ಕೆ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ. ‘ನೀವು ಚುನಾವಣೆಗೆ ಸ್ಪರ್ಧಿಸುತ್ತೀರಾ?’ ಎಂದು ಮಾಧ್ಯಮಗಳ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ನಾನು ಸಾಮಾನ್ಯ ಮನುಷ್ಯನಾಗಿ ಇರುವುದೇ ಉತ್ತಮ’ ಎಂದು ಅವರು ಹೇಳಿದ್ದಾರೆ.

ಬಹುತೇಕ ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸುವ ಸೋನು ಅವರು ರಿಯಲ್ ಲೈಫಿನಲ್ಲಿ ರಿಯಲ್ ಹೀರೋ ಆಗಿದ್ದಾರೆ. ಸಾಕಷ್ಟು ಜನರಿಗೆ ಆಪತ್ಬಾಂದವ ಆಗಿದ್ದಾರೆ. ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಕಳುಹಿಸಿ ಕೊಡುವುದರ ಮೂಲಕ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ ಅವರು, ಅದನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next