Advertisement

Sandalwood: ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ- ಶಿವಣ್ಣ

11:18 AM Jul 11, 2024 | Team Udayavani |

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಯಾಂಡಲ್‌ ವುಡ್‌ ಸ್ಟಾರ್‌ ಗಳು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಕಡಿಮೆಯಾಗಿದೆ.

Advertisement

ಗೋಲ್ಡನ್‌ ಸ್ಟಾರ್ ಗಣೇಶ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಕೂಡ ಇತ್ತೀಚೆಗೆ ಹುಟ್ಟುಹಬ್ಬದ ದಿನ ನಾವು ಮನೆಯಲ್ಲಿ ಇರಲ್ಲ ಎಂದು ಹೇಳಿ ಅಭಿಮಾನಿಗಳು ಇದ್ದಲ್ಲಿನಿಂದಲೇ ಹರಸಿ ಎಂದು ಹೇಳಿದ್ದರು. ಇದೀಗ ಶಿವರಾಜ್‌ ಕುಮಾರ್‌ (Shiva Rajkumar) ಕೂಡ ಹುಟ್ಟುಹಬ್ಬದಂದು ತಮ್ಮೊಂದಿಗೆ ಇರಲು ಆಗುವುದಿಲ್ಲ ಎಂದು ಅಭಿಮಾನಿಗಳಿಗೆ ಹೇಳಿದ್ದರು.

“ಅಭಿಮಾನಿ ದೇವರುಗಳಿಗೆ,ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹ್ಯಾಂಡ್‌ ಶೇಕ್ ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ Birthdayಗೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು Birthdayಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ, ಜುಲೈ 12 | 10:10ಕ್ಕೆ ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ಇದೇ ಶುಕ್ರವಾರ, ಜುಲೈ 12ರಂದು ಶಿವಣ್ಣ ತಮ್ಮ 62ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಈ ದಿನ ಅವರ ಮುಂದಿನ ಬಹುನಿರೀಕ್ಷಿತ ʼಭೈರತಿ ರಣಗಲ್‌ʼ (Bhairathi Ranagal) ಚಿತ್ರದ ಟೀಸರ್‌ ರಿಲೀಸ್‌ ಆಗಲಿದೆ.

ಈಗಾಗಲೇ ಚಿತ್ರದ ಆಡಿಯೋ ಹಕ್ಕನ್ನು ಆನಂದ್‌ ಆಡಿಯೋ ಭಾರೀ ಮೊತ್ತಕ್ಕೆ ಖರೀದಿಸಿದೆ.

Advertisement

ಮಫ್ತಿ ಚಿತ್ರದ ಪ್ರೀಕ್ವೆಲ್‌ ಆಗಿರುವ ಭೈರತಿ ರಣಗಲ್‌ನಲ್ಲಿ ಅವಿನಾಶ್, ದೇವರಾಜ್, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ.

ನರ್ತನ್‌ (Narthan) ನಿರ್ದೇಶನದ ಈ ಸಿನಿಮಾ ಆ.15 ರಂದು ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಆದರೆ ಚಿತ್ರದ ಕೆಲ ಕೆಲಸಗಳು ಬಾಕಿ ಉಳಿದಿದೆ ಈ ಕಾರಣದಿಂದ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿದೆ.

ಈ ದಿನ ಅರ್ಜುನ್‌ ಜನ್ಯ ನಿರ್ದೇಶನದ ʼ45ʼ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಲಿದೆ.

ಶಿವರಾಜ್‌ ಕುಮಾರ್‌ ಹುಟ್ಟುಹಬ್ಬದಂದು ಅವರ ಮುಂದಿನ ಸಿನಿಮಾದ ಪೋಸ್ಟರ್‌ ಹಾಗೂ ಟೀಸರ್‌ ಗಳು ರಿಲೀಸ್‌ ಆಗುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next