Advertisement

ಚಿತ್ರ ಕಲಾವಿದೆಯ ಕೋಸ್ಟಲ್‌ವುಡ್‌ ಪ್ರವೇಶ !

12:47 PM Oct 04, 2018 | |

ಚಿತ್ರ ಬಿಡಿಸಿ ಬಣ್ಣದ ಲೋಕದಲ್ಲಿ ಬೆರಗು ಸೃಷ್ಟಿಸಿ ದೇಶವ್ಯಾಪಿ ಸುದ್ದಿ ಮಾಡಿದ ಮಂಗಳೂರಿನ ಶಬರಿ ಗಾಣಿಗ ಈಗ ಕೋಸ್ಟಲ್‌ವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಭಾರತದ ಮೊದಲ ವೇಗದ ಚಿತ್ರ ಬಿಡಿಸುವ ಮಹಿಳಾ ಕಲಾವಿದೆ ಎಂಬ ಹೆಗ್ಗಳಿಕೆಯ ಶಬರಿ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಅಭಿನಯ ಚಾತುರ್ಯತೆ ಮೆರೆಯಲು ರೆಡಿಯಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚೇತನ್‌ ಮುಂಡಾಡಿ ನಿರ್ದೇಶನದ ‘ಪ್ರವೇಶ’ ಸಿನೆಮಾದಲ್ಲಿ ಶಬರಿ ಬಣ್ಣ ಹಚ್ಚಲಿದ್ದಾರೆ. ಚಿತ್ರ ಕಲಾವಿದೆಯಾಗಿ ಬಣ್ಣಗಳ ಚಿತ್ತಾರದಿಂದ ಮೋಡಿ ಮಾಡಿದ ಶಬರಿ ಅವರು ವಿವಿಧ ಆಲ್ಬಂ ಸಾಂಗ್‌ನ ಮೂಲಕವೂ ಸದ್ದು ಮಾಡಿದ್ದರು.

Advertisement

‘ಜುಗಾರಿ’ ಸಿನೆಮಾದಲ್ಲಿ ಒಂದು ಹಾಡಿಗೂ ಧ್ವನಿಯಾಗಿದ್ದಾರೆ. ಡಬ್ಬಿಂಗ್‌ ಆರ್ಟಿಸ್ಟ್‌ ಆಗಿ ಈಗಾಗಲೇ ಸೂಂಬೆ, ಕುಡ್ಲ ಕೆಫೆ ಸಿನೆಮಾದಲ್ಲಿ ಧ್ವನಿ ನೀಡಿದ ಶಬರಿ ದೊಂಬರಾಟ ಸಿನೆಮಾದಲ್ಲೂ ಹಾಡಿಗೆ ಸ್ವರವಾಗಿದ್ದಾರೆ. ಅಂದ ಹಾಗೆ ಪೃಥ್ವಿ ಅಂಬರ್‌ ನಾಯಕ, ಬಿಂದು ರಕ್ಷಿಧಿ ನಾಯಕಿಯಾಗಿ ನಟಿಸುತ್ತಿರುವ ಪ್ರವೇಶ ಸಿನೆಮಾದ ಕತೆ, ಚಿತ್ರಕತೆ, ಸಂಭಾಷಣೆ ಚೇತನ್‌ ಮುಂಡಾಡಿ ಅವರದ್ದು. ವಿನು ಬಳಂಜ, ಜೋಗಿ ಕಥೆ ವಿಸ್ತರಿಸಿದ್ದಾರೆ. ಈ ಚಿತ್ರಕ್ಕೂ ಮದಿಪು ಚಿತ್ರದ ತಂತ್ರಜ್ಞರ ಬಹುತೇಕ ತಂಡವೇ ಇದೆ. ವಿ. ಮನೋಹರ್‌ ಸಂಗೀತ, ಛಾಯಾಗ್ರಾಹಣ- ಗಣೇಶ್‌ ಹೆಗಡೆ, ಉಗ್ರಂ ಶ್ರೀಕಾಂತ್‌ ಎಡಿಟಿಂಗ್‌ ವಿಭಾಗದಲ್ಲಿ ಕೆಲಸ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next