Advertisement

Seema Deo: ಮರಾಠಿ ಸಿನಿಮಾರಂಗದ ದಿಗ್ಗಜೆ, ನಟಿ ಸೀಮಾ ದಿಯೋ ನಿಧನ

12:21 PM Aug 24, 2023 | Team Udayavani |

ಮುಂಬಯಿ: ಮರಾಠಿ ಸಿನಿಮಾರಂಗದ ದಿಗ್ಗಜೆ, ಹಿರಿಯ ನಟಿ ಸೀಮಾ ದಿಯೋ (83) ಗುರುವಾರ (ಆ.24 ರಂದು) ನಿಧನರಾಗಿದ್ದಾರೆ.

Advertisement

ಅವರ ನಿಧನದ ಸುದ್ದಿಯನ್ನು ಅವರ ಮಗ ಅಭಿನಯ್ ದೇವ್ “ಇಂಡಿಯನ್‌ ಎಕ್ಸ್‌ ಪ್ರೆಸ್‌”ಗೆ ತಿಳಿಸಿದ್ದಾರೆ.

“ಅಮ್ಮ ಇಂದು ಮುಂಜಾನೆ ನಿಧನರಾದರು. ಅವರು ಚೆನ್ನಾಗಿದ್ದರು, ಅವಳು ಆಲ್‌ಝೈಮರ್‌ ಕಾಯಿಲೆ (ಒಂದು ರೀತಿಯ ಮರೆವಿನ ಕಾಯಿಲೆ) ಬಳಲುತ್ತಿದ್ದರು, ಆದರೂ ಅವರು ಚೆನ್ನಾಗಿದ್ದರು” ಎಂದು ಹೇಳಿದ್ದಾರೆ.

ಸೀಮಾ ದಿಯೋ ಆಲ್‌ಝೈಮರ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಅವರ ಗುಣಮುಖರಾಗಲು ಪ್ರಾರ್ಥಿಸಿ ಎಂದು 2020 ರಲ್ಲೇ ಅವರ ಮಗ ಅಭಿನಯ್‌ ಟ್ವೀಟ್‌ ಮೂಲಕ ಹೇಳಿದ್ದರು.

ಇದನ್ನೂ ಓದಿ: Adipurush‌: ʼಚಂದ್ರಯಾನ-3ʼ ಬಜೆಟ್ ʼಆದಿಪುರುಷ್‌ʼ ಬಜೆಟ್‌ಗಿಂತ ಕಡಿಮೆ; ಟ್ರೋಲ್‌ ಆದ ಸಿನಿಮಾ

Advertisement

ಒಟ್ಟು 80 ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಅವರು ಮರಾಠಿ ಸಿನಿಮಾರಂಗದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ʼ ಜಗಚ್ಯಾ ಪಾಥಿವಾರ್ʼ , ʼ ವರದಕ್ಷಿಣʼ ಮುಂತಾದ ಹಿಟ್‌ ಮರಾಠಿ ಸಿನಿಮಾದಲ್ಲಿ ಅವರು ನಟಿಸಿದ್ದರು. 2021 ರಲ್ಲಿ ಮರಾಠಿ ಚಲನಚಿತ್ರ ʼಜೀವನ್ ಸಂಧ್ಯಾʼರಲ್ಲಿ ಕೊನೆಯ ಬಾರಿ ಅವರು ಕಾಣಿಸಿಕೊಂಡಿದ್ದರು. ಮರಾಠಿ ಮಾತ್ರವಲ್ಲದೆ ʼಆನಂದ್ʼ, ಕೋಶಿಶ್ ಮತ್ತು ʼಕೋರಾ ಕಾಗಜ್ʼ ಮುಂತಾದ ಹಿಂದಿ ಸಿನಿಮಾದಲ್ಲೂ ಅವರು ನಟಿಸಿದ್ದರು.

ಸೀಮಾ ಅವರ ಪತಿಯಾಗಿದ್ದ ನಟ ರಮೇಶ್ ದಿಯೋ ಅವರು 2022 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸೀಮಾ ಅವರು ಮಕ್ಕಳಾದ ಅಜಿಂಕ್ಯ ಮತ್ತು ಅಭಿನಯ್ ದಿಯೋ ಅವರನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next