Advertisement

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

11:17 AM May 08, 2024 | |

ಮಾತು ರಿಷಿ ನಾಯಕರಾಗಿ ನಟಿಸಿರುವ “ರಾಮನ ಅವತಾರ’ ಚಿತ್ರ ಮೇ 10ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಈ ಚಿತ್ರದ ಮೇಲೆ ರಿಷಿ ಕೂಡಾ ನಿರೀಕ್ಷೆ ಇಟ್ಟಿದ್ದು, ಚಿತ್ರದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ…

Advertisement

ರಾಮನ ಅವತಾರ ಚಿತ್ರದ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?

ನಿರೀಕ್ಷೆ ಅನ್ನೋದಕ್ಕಿಂತ ನಮಗೆ ಬಹಳ ಖುಷಿಕೊಟ್ಟ ಸಿನಿಮಾವಿದು. ಇಡೀ ಸಿನಿಮಾದ ಜರ್ನಿಯನ್ನು ನಾವು ಬಹಳಷ್ಟು ಎಂಜಾಯ್‌ ಮಾಡಿದ್ದೇವೆ. ನೋಡುಗರಿಗೂ ಚಿತ್ರ ಖುಷಿ ಕೊಡುತ್ತದೆ ಎಂಬ ವಿಶ್ವಾಸವಿದೆ. ಒಂದು ಫ್ರೆಶ್‌ ಮೈಂಡ್‌ ಸೆಟ್‌ನಿಂದ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ “ರಾಮನ ಅವತಾರ’ ಫೀಲ್‌ ಗುಡ್‌ ಸಿನಿಮಾ ಆಗಲಿದೆ.

ಚಿತ್ರದಲ್ಲಿ ನಿಮ್ಮ ಪಾತ್ರ ಏನು?

ಜಂಟಲ್‌ ರಾಮಕೃಷ್ಣ ಎಂಬ ಪಾತ್ರ ನನ್ನದು. ಊರಿನವರೆಲ್ಲಾ ಕೆಲಸಕ್ಕಾಗಿ ಬೇರೆ ಊರಿಗೆ ಹೋದರೆ ಆ ಊರು ಬೆಳೆಯಲು ಸಾಧ್ಯವಿಲ್ಲ, ಬದಲಾಗಿ ನಮ್ಮ ಊರಲ್ಲೇ ಕೆಲಸ ಸೃಷ್ಟಿಸಿದರೆ ಊರು ಉದ್ಧಾರ ಆಗುತ್ತದೆ ಎಂದು ನಂಬಿದ ಪಾತ್ರ. ಅವನನ್ನು ಅವನೇ ಲೀಡರ್‌ ಎಂದುಕೊಂಡು ಎಲ್ಲದಕ್ಕೂ ಮುಂದೆ ಹೋಗುತ್ತಿರುತ್ತಾನೆ. ಇದು ಅನೇಕ ಎಡವಟ್ಟುಗಳಿಗೂ ಕಾರಣವಾಗುತ್ತದೆ. ಇವೆಲ್ಲವೂ ಚಿತ್ರದಲ್ಲಿ ಪ್ರೇಕ್ಷಕರಿಗೆ ನಗುತರಿಸುತ್ತವೆ.

Advertisement

ಇದು ಯಾವ ಜಾನರ್‌ಗೆ ಸೇರುವ ಸಿನಿಮಾ

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ಸಿನಿಮಾ ನೋಡಿದವರಿಗೆ ಖಂಡಿತಾ ಇಷ್ಟವಾಗುತ್ತದೆ. ಸಿನಿಮಾ ಹೆಚ್ಚು ಜನರಿಗೆ ತಲುಪಬೇಕೆಂಬ ಕಾರಣಕ್ಕೆ ಮೇ 10ರಂದು ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌, ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರವನ್ನು 99 ರೂಪಾಯಿ ಮಾಡಿದ್ದೇವೆ. ಈ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರಲು ಪ್ರೋತ್ಸಾಹಿಸುತ್ತಿದ್ದೇವೆ.

ಪ್ರಣೀತಾ ಹಾಗೂ ಶುಭ್ರ ಅವರ ಬಗ್ಗೆ ಹೇಳಿ?

ಪ್ರಣೀತಾ ಅವರು ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಅಲ್ಲಲ್ಲಿ ರಾಮಾಯಣದ ರೆಫ‌ರೆ‌ನ್ಸ್‌ ಬರುತ್ತೆ. ಅಲ್ಲಿ ಇವರ ಪಾತ್ರ ಕೂಡಾ ಎಂಟ್ರಿ ಆಗುತ್ತಿರುತ್ತದೆ. ಶುಭ್ರ ಅವರ ಪಾತ್ರ ಕೂಡಾ ಚೆನ್ನಾಗಿದೆ.

ಎಷ್ಟು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ?

ಚಿತ್ರಮಂದಿರಗಳು ಇನ್ನೂ ಸೇರಿಕೊಳ್ಳುತ್ತಲೇ ಇವೆ. ಒಂದಂತೂ ಹೇಳಬಲ್ಲೆ, ಒಂದೊಳ್ಳೆಯ ರಿಲೀಸ್‌ನೊಂದಿಗೆ “ರಾಮನ ಅವತಾರ’ ಚಿತ್ರಮಂದಿರಕ್ಕೆ ಬರುತ್ತಿದೆ.

ಶ್ರೀರಾಮನ ಗುಣ ಇವತ್ತಿನ ನಿಮ್ಮ ಪಾತ್ರಕ್ಕೆ ಕನೆಕ್ಟ್ ಆಗುತ್ತಾ?

ಪ್ರತಿಯೊಬ್ಬನಲ್ಲೂ ಶ್ರೀರಾಮನ ಗುಣವಿದೆ. ಸಂದರ್ಭಕ್ಕೆ ತಕ್ಕಂತೆ ಶ್ರೀರಾಮನ ಗುಣ ನಾಯಕನಲ್ಲಿ ಕಾಣುತ್ತದೆ. ಇದು ಇವತ್ತಿನ ಕಾಲಘಟ್ಟದಲ್ಲಿ ನಡೆಯುವ ಕಥೆ.

Advertisement

Udayavani is now on Telegram. Click here to join our channel and stay updated with the latest news.

Next