ಹೊಸದಿಲ್ಲಿ: ತ್ರಿಭಾಷಾ ನಟಿ, ನಿರ್ಮಾಪಕಿ ರಿಮಿ ಸೇನ್ ಅವರು ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಷ್ ವಿಜಯವರ್ಗೀಯ ಅವರು ಪಕ್ಷಕ್ಕೆ ಬರಮಾಡಿಕೊಂಡರು.
ನಾನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನಾನು ಮಾತ್ರವಲ್ಲದೆ ಇಡೀ ದೇಶವೇ ಪ್ರಧಾನಿ ಕಾರ್ಯವನ್ನು ಮೆಚ್ಚಿಕೊಂಡಿದೆ. ಪಕ್ಷ ನನ್ನ ಸೇವೆ ಎಲ್ಲಿ ಬಯಸುತ್ತದೊ ಅಲ್ಲಿ ನಾನು ಕೆಲಸ ಮಾಡುತ್ತೇನೆ ಎಂದರು.
35 ರ ಹರೆಯದ ರಿಮಿ ಸೇನ್ ಅವರು ಹಿಂದಿ, ಬಂಗಾಲಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. 2015 ರಲ್ಲಿ ಬಿಗ್‌ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಯಾಗಿದ್ದರು.
ಸಲ್ಮಾನ್ ಖಾನ್, ಅಜಯ್ ದೇವ್‌ಗನ್, ಅಕ್ಷಯ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿರುವ ಹೆಗ್ಗಳಿಕೆ ರಿಮಿ ಸೇನ್ ಅವರದ್ದಾಗಿದೆ.
ಇದೇ ವೇಳೆ ಭೋಜ್‌ಪುರಿ ನಟಿ, ಮಾಡೆಲ್ ಕಾಶಿಶ್ ಖಾನ್ ಅವರು ಬಿಜೆಪಿಗೆ ಸೇರ್ಪಡೆಯಾದರು.