Advertisement

New Year: ಬೂಸ್ಟರ್‌ ಡೋಸ್‌ನಂತೆ, ಓಡಾಟ ಒಡನಾಟದ ಯಶೋಗಾಥೆ

12:11 PM Dec 31, 2023 | Team Udayavani |

2023ರಲ್ಲಿ ನನಗೆ ತುಂಬ ಸ್ಮರಣೀಯವಾಗಿರುವಂಥ ಎರಡು ವಿಷಯಗಳು ಅಂದ್ರೆ, ಮೊದಲನೆಯದ್ದು “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಐದನೇ ಸೀಜನ್‌ ಅನ್ನು ಸಕ್ಸಸ್‌ಫ‌ುಲ್‌ ಆಗಿ ಮುಗಿಸಿದ್ದು. ಎರಡನೆಯದ್ದು, ಇಡೀ ವರ್ಷ ನಮ್ಮ ರಾಜ್ಯದೊಳಗೇ ಹತ್ತಾರು ಊರುಗಳಿಗೆ ಓಡಾಟ ಮಾಡಿದ್ದು. ಅದರಲ್ಲಿ ಮೊದಲನೆಯ ವಿಷಯ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ, ನಿರೂಪಕನಾಗಿ ನನ್ನ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿ

Advertisement

ನಿಲ್ಲುವಂಥ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಐದನೇ ಸೀಜನ್‌ ಯಶಸ್ವಿಯಾಗಿ ಮುಗಿಯಿತು. ನೂರು ಸಾಧಕರನ್ನು “ವೀಕೆಂಡ್‌ ವಿಥ್‌ ರಮೇಶ್‌’ ಐದನೇ ಸೀಜನ್‌ನಲ್ಲಿ ಕೂರಿಸಿದ್ದೆವು. ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ಕಿರುತೆರೆಯಲ್ಲೇ ಇದೊಂದು ಅಪರೂಪದ ದಾಖಲೆಯಾಗಿ ಉಳಿಯಿತು. ನಮ್ಮ ನಡುವಿನ ನೂರು ಸಾಧಕರ ಬದುಕಿನ ಯಶೋಗಾಥೆಯನ್ನು ಅವರ ಮುಂದೆ ನಿಂತು ಅವರ ಬಾಯಿಂದ ಕೇಳುವುದೇ ಒಂದು ಪರಮಾನಂದ. ನಿರೂಪಕನಾಗಿ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮ ಈ ವರ್ಷ ಖುಷಿ, ಸಂತೃಪ್ತಿ ಕೊಟ್ಟಿತು.

ಎರಡನೇ ವಿಷಯ ಅಂದ್ರೆ, 2023ರಲ್ಲಿ ಇಡೀ ಕರ್ನಾಟಕ ಸುತ್ತಿದ್ದು. ಸಾಮಾನ್ಯವಾಗಿ ಪ್ರತಿ ವರ್ಷ ನಾನು ಒಂದಷ್ಟು ದೇಶಗಳಿಗೆ ಪ್ರವಾಸ ಮಾಡುತ್ತೇನೆ. ಅಲ್ಲಿ ಹತ್ತಾರು ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಆದರೆ ಈ ವರ್ಷ ಇಡೀ ರಾಜ್ಯದೊಳಗೆ ನನ್ನ ಬಹುತೇಕ ಸುತ್ತಾಟ ನಡೆಯಿತು. ನಮ್ಮ ಸುತ್ತಮುತ್ತಲಿರುವ ನನಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳನ್ನು ಈ ಓಡಾಟದಲ್ಲಿ ತಿಳಿದು­ಕೊಂಡೆ. ಹತ್ತಾರು ಕಡೆ ಮೋಟಿವೆಶನ್‌ ಸ್ಪೀಚ್‌ ಕೊಟ್ಟಿದ್ದೇನೆ. ಈ ಎರಡೂ ಕೂಡ 2023ರಲ್ಲಿ ನನ್ನ ಜೀವನದಲ್ಲಿ ಕೊನೆಯವರೆಗೂ ಉಳಿಯಬಹುದಾದ ಅವಿಸ್ಮರಣೀಯ ವಿಷಯ­­ಗಳು. ಇದೇ ಹೊಸ ವರ್ಷಕ್ಕೆ ನನಗೆ ಕೆಲಸ ಮಾಡಲು ಹೊಸ ಶಕ್ತಿ ಕೊಡುತ್ತಿದೆ ಎಂದೂ ಹೇಳಬಹುದು.

-ರಮೇಶ್‌ ಅರವಿಂದ್‌,ನಟ, ನಿರ್ದೇಶಕ ಮತ್ತು ನಿರೂಪಕ

Advertisement

Udayavani is now on Telegram. Click here to join our channel and stay updated with the latest news.

Next