ಮಂಡ್ಯ: ನಟ ಪುನೀತ್ ರಾಜಕುಮಾರ್ ಸಾವಿನ ಬಳಿಕವೂ ನೇತ್ರದಾನ ಮಾಡುವ ಮೂಲಕ ಇಬ್ಬರು ಅಂಧರ ಬಾಳಿಗೆ ಬೆಳಕಾಗಿ ಸಾರ್ಥಕತೆ ಮೆರೆದಿದ್ದಾರೆ ಎಂದು ಶಾಸಕ ಎಂ. ಶ್ರೀನಿವಾಸ್ ಹೇಳಿದರು. ತಾಲೂಕಿನ ಹನಕೆರೆ ವಿವೇಕ ವಿದ್ಯಾಸಂಸ್ಥೆ ವತಿಯಿಂದ ಶಾಲಾ ಆವರಣದಲ್ಲಿ ನಡೆದ ಅಗಲಿದ ನಟ ದಿ.ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಪುನೀತ್ ನಗುಮುಖ, ಸರಳ ವ್ಯಕ್ತಿತ್ವದಿಂದ ಎಲ್ಲರಿಗೂ ಇಷ್ಟವಾಗುತ್ತಿದ್ದ.
ತಂದೆ ರಾಜಕುಮಾರ್ ಅವರ ನಡೆಯನ್ನು ಅನುಸರಿಸಿ ಪುನೀತ್ ನೇತ್ರದಾನ ಮಾಡುವ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದು, ತಂದೆಗೆ ತಕ್ಕ ಮಗ ಎಂದು ಬಣ್ಣಿಸಿದರು.
ಚಿತ್ರರಂಗ ಅನಾಥ: ಡಾ.ರಾಜಕುಮಾರ್ ಅವರ ಕಿರಿಯ ಮಗನಾದ ಲೋಹಿತ್ ಅವರು ಪುನೀತ್ ರಾಜಕುಮಾರ್ ಆಗುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಉನ್ನತ ಹೆಸರು ಗಳಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ನಿಧನರಾಗುವ ಮೂಲಕ ಕನ್ನಡ ಚಿತ್ರರಂಗವನ್ನು ಅನಾಥ ಮಾಡಿದ್ದಾರೆ ಎಂದು ಕಂಬನಿ ಮಿಡಿದರು. ಪುನೀತ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅಭಿಮಾನಿಗಳು ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕೋರಿದರು.
ಇದನ್ನೂ ಓದಿ:- ಮೀನು ಪದಾರ್ಥಕ್ಕಾಗಿ ಸ್ನೇಹಿತರ ಜಗಳ: ಕೊಲೆಯಲ್ಲಿ ಅಂತ್ಯ
ಸಮಾಜಕ್ಕೆ ಒಳ್ಳೆಯ ಸಂದೇಶ: ವಿವೇಕ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಜಯರಾಂ ಮಾತನಾಡಿ, ಪುನೀತ್ ರಾಜಕುಮಾರ್ ನಟನೆ ಜೊತೆಗೆ ಸಾಮಾಜಿಕ ಕೆಲಸ ಮಾಡಿದವರು. ಹಲವು ಜೀವಗಳಿಗೆ ಆಶ್ರಯಧಾತರಾಗಿದ್ದರು. ಬೆಂಗಳೂರಿನಲ್ಲಿ ಡಾ.ರಾಜ್‌ಕುಮಾರ್ ಅಕಾಡೆಮಿ ಸ್ಥಾಪಿಸಿ ಐಎಎಸ್ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರು ಎಂದು ಹೇಳಿದರು. ಅಪ್ಪನನ್ನು ಮೀರಿಸುವಷ್ಟು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ. ಅವರ ಚಲನಚಿತ್ರಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವಂತವಾಗಿವೆ ಎಂದರು.
ಉದ್ಯೋಗಾ ಧಿಕಾರಿ ವೇಣುಗೋಪಾಲ್, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಅಧಿ ಕಾರಿ ಶಿವಕುಮಾರ್, ವಿವೇಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ಅಶ್ವತ್ಥ್, ಉಪಾಧ್ಯಕ್ಷ ಸಿ.ಮಾದಯ್ಯ, ಸಹ ಕಾರ್ಯದರ್ಶಿ ಶಿವರಾಂ ಇದ್ದರು.
ಬೆಳಗೊಳದ ಹಿರಿಯರ ಜೊತೆ ಒಡನಾಟ
ಶ್ರೀ ರಂಗಪಟ್ಟಣ: ನಟ ಪುನೀತ್ ರಾಜ್‌ಕುಮಾರ್ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಹಿರಿಯರು ಎಂದರೆ ಅಪಾರ ಗೌರವ. ಈ ಗ್ರಾಮದ ಅಕ್ಕಪಕ್ಕ ಬಲಮುರಿ ಇತರೆ ಗ್ರಾಮಕ್ಕೆ ಶೂಟಿಂಗ್‌ಗೆ ಬಂದಾಗ ಬೆಳಗೊಳ ಗ್ರಾಮದ ಹಿರಿಯರ ಜೊತೆ ಸಾಕಷ್ಟು ಒಡನಾಡ ಇಟ್ಟುಕೊಂಡಿದ್ದರು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಲೋಕೇಶ್ ತಿಳಿಸಿದರು. ಅಲ್ಲದೇ ಇವರ ಮನೆಗಳಿಗೆ ಭೇಟಿಕೊಟ್ಟು ಕುಟುಂಬದವರ ಜೊತೆ ಒಡನಾಟ ಇಟ್ಟುಕೊಂಡಿದ್ದರು.
ಇದಕ್ಕೆ ಸಾಕ್ಷಿ ಎಂಬಂತೆ ಈ ಗ್ರಾಮದ ಚಿಕ್ಕಯಜಮಾನರಾಗಿದ್ದ ನಮ್ಮ ಚಿಕ್ಕಪ್ಪ ನಾಗರಾಜು ನಿಧನರಾಗಿ¨ªಾಗ ಅರ್ಧರಾತ್ರಿಯಲ್ಲಿ ಬಂದು ಅಂತಿಮ ದರ್ಶನ ಪಡೆದು ಹೋಗಿದ್ದರು. ಮನೆಯವರ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡು ಮನೆಯ ಮಗನಂತೆ ಆಗಾಗ ಈ ಭಾಗಕ್ಕೆ ಶೂಟಿಂಗ್ ಬಂದ ವೇಳೆ ಅಡುಗೆ ಮಾಡಿಸಿ ಅವರಿದ್ದ ಸ್ಥಳಕ್ಕೆ ನಮ್ಮ ಚಿಕ್ಕಪ್ಪ ತೆಗೆದುಕೊಂಡು ಊಟ ಕೊಟ್ಟು ಉಣಬಡಿಸಿ ಬರುತ್ತಿದ್ದರು. ಅವರು ಕೂಡ ಸವಿದು ಹೋಗುತ್ತಿದ್ದ ನೆನಪಿನಿಂದ ಕುಟುಂಬ ಇದೀಗ ಅಪ್ಪು ನಿಧನಕ್ಕೆ ಕಂಬನಿ ಮಿಡಿಯುತ್ತಿದೆ ಎಂದರು.