Advertisement

ನಟ ಪ್ರವೀಣ್‌ ದರಾಡೆಗೆ ಸ್ವಾಮಿ ಸಮರ್ಥ ಅನ್ನಛತ್ರದಿಂದ ಸಮ್ಮಾನ 

01:38 PM Mar 15, 2019 | Team Udayavani |

ಸೊಲ್ಲಾಪುರ: ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಲ್ಲಿ ಅತ್ಯಂತ ಪವಿತ್ರವಾಗಿರುವ ತೀರ್ಥ ಕ್ಷೇತ್ರ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ ಆಗಮಿಸಿದಾಗ ನಮಗೆ ಯಾವ ಸಮಾಧಾನ ದೊರೆಯುತ್ತದೆ ಅದು ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ಚಿತ್ರನಟ ಪ್ರವೀಣ್‌ ದರಡೆ ಅವರು ನುಡಿದರು.

Advertisement

ಮಾ. 12ರಂದು ಅಕ್ಕಲ್‌ಕೋಟೆ ತೀರ್ಥಕ್ಷೇತ್ರದ  ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಟ್ರಸ್ಟ್‌ ಮಂಡಳಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ ಮಂಡಳದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮಂಡಳದ ಸಂಸ್ಥಾಪಕ ಅಧ್ಯಕ್ಷರಾದ ಜನ್ಮೆಜಯ ಭೋಸಲೆ ಮತ್ತು ವಿಶ್ವಸ್ತ ಅಮೋಲ್‌ ಭೋಸ್ಲೆ ಅವರ ಪರಿಶ್ರಮದಿಂದ ಪ್ರಾರಂಭಗೊಂಡಿರುವ ಅನ್ನ ಛತ್ರವು ಇಂದು ದೇಶಾದ್ಯಂತ ಹೆಸರುವಾಸಿಯಾಗಿದೆ. ಅಲ್ಲದೇ ಅನ್ನದಾಸೋಹದ ಜತೆಗೆ ಶಿವಾಜಿ ಮಹಾರಾಜರ ಸ್ಮಾರಕ, ಶಿವಚರಿತ್ರೆ ಮತ್ತು ಭವ್ಯವಾದ ಉದ್ಯಾನ ನಿರ್ಮಾಣ ಮಾಡಿದ್ದರಿಂದ ಭಕ್ತರ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುವಂತಾಗಿದೆ ಎಂದು ಹೇಳಿದರು.

ಮಂಡಳದ ಮುಖ್ಯ ವಿಶ್ವಸ್ತ ಅಮೋಲ್‌ ಭೋಸ್ಲೆ,  ಕಾರ್ಯದರ್ಶಿ ಶ್ಯಾಮರಾವ ಮೋರೆ, ಉಪಾಧ್ಯಕ್ಷ ಅಭಯ ಖೋಬರೆ, ಲಕ್ಷ್ಮಣ್‌ ಪಾಟೀಲ್‌,  ಅಪ್ಪಾ ಹಂಚಾಟೆ, ಸಿದ್ಧೇಶ್ವರ ಮೋರೆ, ವೈಭವ ನವಲೆ, ಪ್ರವೀಣ್‌ ದೇಶಮುಖ್‌, ರೋಹಿತ ಖೋಬರೆ, ನಿಖೀಲ್‌ ಪಾಟೀಲ್‌, ಸಿದ್ಧೇಶ್ವರ ಹತ್ತುರೆ, ಶ್ರೀಶೈಲ  ಕುಂಬಾರ, ಮಹಾಂತೇಶ ಸ್ವಾಮಿ, ಸ್ವಾಮಿನಾಥ ಗುರವ, ಸಿದ್ಧಪ್ಪ ಪೂಜಾರಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next