Advertisement

Actor ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್

09:15 PM Nov 23, 2023 | Vishnudas Patil |

ಮುಂಬಯಿ: 100 ಕೋಟಿ ರೂಪಾಯಿ ಮೊತ್ತದ ಪೋಂಜಿ ಸ್ಕೀಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗಾಗಿ ಕರೆಸಲು ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.

Advertisement

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ನವೆಂಬರ್ 20 ರಂದು ತಿರುಚಿರಾಪಳ್ಳಿ, ಪ್ರಣವ್ ಜ್ಯುವೆಲ್ಲರ್ಸ್ ಮೂಲದ ಪಾಲುದಾರಿಕೆ ಸಂಸ್ಥೆಗೆ ಸಂಬಂಧಿಸಿರುವ ಆಸ್ತಿಗಳ ಮೇಲೆ ತನಿಖಾ ಸಂಸ್ಥೆ ನಡೆಸಿದ ಶೋಧಗಳನ್ನು ಸಮನ್ಸ್ ಅನುಸರಿಸಿದೆ.

ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ನೀಡಿರುವುದು ಪ್ರಣವ್ ಜ್ಯುವೆಲರ್ಸ್ ರೂಪಿಸಿರುವ ನಕಲಿ ಚಿನ್ನದ ಹೂಡಿಕೆ ಯೋಜನೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

58 ರ ಹರೆಯದ ಖ್ಯಾತ ಬಹುಭಾಷಾ ನಟ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಡಿಸೆಂಬರ್ 5 ರಂದು ಚೆನ್ನೈನಲ್ಲಿರುವ ಫೆಡರಲ್ ಏಜೆನ್ಸಿಯ ಮುಂದೆ ಹಾಜರಾಗಲು ಕೇಳಲಾಗಿದೆ.

ಇಡಿ ನೇತೃತ್ವದ ದಾಳಿಗಳು ವಿವಿಧ ದೋಷಾರೋಪಣೆ ದಾಖಲೆಗಳು, 23.70 ಲಕ್ಷ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಮತ್ತು 11.60 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next