Advertisement

ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್‌ ರೈ ಸ್ಪರ್ಧೆ

03:50 AM Jan 02, 2019 | Harsha Rao |

ಚೆನ್ನೈ: ಬಹುಭಾಷಾ ನಟ ಪ್ರಕಾಶ್‌ ರೈ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತುಗಳನ್ನಾಡಿದ್ದಾರೆ. ಹೊಸ ವರ್ಷದ ಶುಭಾಶಯ ಕೋರುವ ನಿಟ್ಟಿನಲ್ಲಿ ಮಂಗಳವಾರ ಟ್ವೀಟ್‌ ಮಾಡಿರುವ ಅವರು, ಈ ಬಗ್ಗೆ ಘೋಷಿಸಿದ್ದಾರೆ.

Advertisement

“ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಒಂದು ಹೊಸ ಆರಂಭಕ್ಕೆ ಮುಂದಾಗುತ್ತಿದ್ದೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಬೆಂಬಲ ಬೇಕು’ ಎಂದು ಬರೆದುಕೊಂಡಿದ್ದಾರೆ. ಈ ಬಗೆಗಿನ ವಿವರಗಳನ್ನು ಶೀಘ್ರವೇ ಪ್ರಕಟಿಸುವುದಾಗಿ ಹೇಳಿಕೊಂಡಿದ್ದಾರೆ. “ಮುಂದಿನ ಬಾರಿ ಸಂಸತ್‌ನಲ್ಲಿಯೂ ಜನರ ಸರಕಾರ’ ಎಂದೂ ಟ್ವೀಟ್‌ ಮಾಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಒಂದು ವರ್ಷದ ಅವಧಿಯಲ್ಲಿ ರಾಜಕೀಯ ಪ್ರವೇಶಿಸಿದ ಬಹುಭಾಷಾ ನಟ ಕಮಲಹಾಸನ್‌, ತಮಿಳು ಸೂಪರ್‌ ಸ್ಟಾರ್‌ ರಜನೀಕಾಂತ್‌ ಬಳಿಕ ಪ್ರಕಾಶ್‌ ರೈ ಮೂರನೇಯ ವರಾಗಿದ್ದಾರೆ.

ಇದೇ ವೇಳೆ ರೈ ನಿರ್ಧಾರಕ್ಕೆ ಟ್ವಿಟರ್‌ನಲ್ಲಿ ಟಾಂಗ್‌ ನೀಡಿರುವ ಮಾಜಿ ಸಚಿವ ಸುರೇಶ್‌ ಕುಮಾರ್‌ ಚುನಾವಣಾ ಕ್ಷೇತ್ರದಲ್ಲಿ ರೀ ಟೇಕ್‌, ಎಡಿಟಿಂಗ್‌ ಇರುವುದಿಲ್ಲ. ಸಿದ್ಧಪಡಿಸಿದ ಸಂಭಾಷಣೆಗೂ ಹೆಚ್ಚು ಅವಕಾಶವಿಲ್ಲ. ಆ್ಯಕ್ಷನ್‌- ಕಟ್‌ ಪದವೇ ನಿಷಿದ್ಧ. ಹುಷಾರಾಗಿರಿ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next