Advertisement

ಗಣನಾಯಕನಿಗೆ ಬರ್ತ್‌ಡೇ ಗಿಫ್ಟ್

03:40 PM Jul 05, 2023 | Team Udayavani |

ಮಂಗಳವಾರ ನಟ ಪ್ರಜ್ವಲ್‌ ದೇವರಾಜ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನಿರಂತರವಾಗಿ ಸಿನಿಮಾ ಮಾಡುತ್ತಾ ಬಿಝಿಯಾಗಿರುವ ಪ್ರಜ್ವಲ್‌ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಅದರಲ್ಲಿ “ಗಣ’ ಕೂಡಾ ಒಂದು. ಈಗಾಗಲೇ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿರುವ “ಗಣ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಮೂಲಕ ಚಿತ್ರತಂಡ ಪ್ರಜ್ವಲ್‌ ಅವರಿಗೆ ಗಿಫ್ಟ್ ನೀಡಿದೆ.

Advertisement

ತಾಯಿ ಸೆಂಟಿಮೆಂಟ್‌ ಜೊತೆಗೆ ಆ್ಯಕ್ಷನ್‌ ಕಥಾಹಂದರ ಟೀಸರ್‌ನಲ್ಲಿ ಗಮನ ಸೆಳೆಯುತ್ತಿದೆ. ಹರಿಪ್ರಸಾದ್‌ ಜಕ್ಕ ನಿರ್ದೇಶನದ ಈ ಸಿನಿಮಾವನ್ನು ಪಾರ್ಥು ನಿರ್ಮಿಸಿದ್ದಾರೆ. ತಮ್ಮನ್ನು ನಂಬಿಕೊಂಡು ಬಂದ ತೆಲುಗು ಮೂಲದ ನಿರ್ಮಾಪಕರಿಗೆ ತನ್ನದೇ ಆದ ಒಂದು ಪ್ರತಿಭಾನ್ವಿತ ತಂಡ ಸಿದ್ಧಪಡಿಸಿಕೊಟ್ಟಿದ್ದಾರೆ ಪ್ರಜ್ವಲ್‌.

ಚಿತ್ರದ ಬಗ್ಗೆ ಮಾತನಾಡುವ ಪ್ರಜ್ವಲ್‌, “ಇದು ಎರಡು ಕಾಲಘಟ್ಟಗಳಲ್ಲಿ ನಡೆಯುವ ಸಿನಿಮಾ. ಮುಖ್ಯವಾಗಿ ಎರಡು ಕಾಲಘಟ್ಟಗಳ ಸಮಯ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಕಥೆ ತುಂಬಾ ವಿಭಿನ್ನವಾಗಿದೆ. ತೆಲುಗಿನ ನಿರ್ಮಾಪಕರು ಬಂದು ಕಥೆ ಹೇಳಿ, ಉಳಿದ ತಂಡವನ್ನು ನೀವೇ ಸಿದ್ಧಪಡಿಸಬೇಕೆಂದರು. ಅದರಂತೆ ನನ್ನ ಜೊತೆಗೆ ಅನೇಕ ವರ್ಷ ಟ್ರಾವೆಲ್‌ ಮಾಡಿರುವ ಹಾಗೂ ಪ್ರತಿಭಾನ್ವಿತರನ್ನು ಸೇರಿಸಿ ಒಂದು ತಂಡ ರಚಿಸಲಾಗಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದು ಸಿನಿಮಾದ ವಿವರ ನೀಡಿದರು.

ನಿರ್ಮಾಪಕ ಪಾರ್ಥುಮಾತನಾಡಿ, “ಇದು ಕಂಟೆಂಟ್‌ ಆಧಾರಿತ ಸಿನಿಮಾ.ಚಿತ್ರದಲ್ಲಿ ತಾಯಿ-ಮಗನ ಸೆಂಟಿಮೆಂಟ್‌ ಜೊತೆಗೆ ಕುತೂಹಲ ಮೂಡಿಸುವ ಮತ್ತೂಂದು ಅಂಶವೂ ಇದೆ. ಅದೇನೆಂಬು ದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎಂದರು.

ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸಿದ್ದಾರೆ. ಒಂದೊಳ್ಳೆಯ ತಂಡದ ಜೊತೆ ಸಿನಿಮಾ ಮಾಡಿದ ಖುಷಿ ಅವರದು. ಉಳಿದಂತೆ ಕೃಷಿ ತಾಪಂಡ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ಮೊದಲ ಬಾರಿಗೆ ಪ್ರಜ್ವಲ್‌ ಜೊತೆ ನಟಿಸಿರುವ ಶಿವರಾಜ್‌ ಕೆ.ಆರ್‌.ಪೇಟೆ ಕೂಡಾ ತಮ್ಮ ಅನುಭವ ಹಂಚಿಕೊಂಡರು.

ಉಳಿದಂತೆ ಸಂಗೀತ ನಿರ್ದೇಶಕ ಅನೂಪ್‌ ಸೀಳೀನ್‌, ಸಂಕಲನಕಾರ ಹರೀಶ್‌ ಕೊಮ್ಮೆ ಸಿನಿಮಾದ ಅನುಭವ ಹಂಚಿಕೊಂಡರು.

ಮಾಫಿಯಾ ಪೋಸ್ಟರ್‌ ಬಂತು:

ಪ್ರಜ್ವಲ್‌ ದೇವರಾಜ್‌ ಬರ್ತ್‌ಡೇ ಹಿನ್ನೆಲೆಯಲ್ಲಿ ಅವರು ನಟಿಸುತ್ತಿರುವ ” ಮಾಫಿಯಾ ‘ ಚಿತ್ರದ ಹೊಸ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಲುಕ್‌ನಲ್ಲಿರುವ ಈ ಪೋಸ್ಟರ್‌ ಚಿತ್ರದ ಮಾಸ್‌ ಫಿಲ್‌ ಅನ್ನು ಕಟ್ಟಿಕೊಡುವಂತಿದೆ. ಆಕ್ಷನ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬೆಂಗಳೂರು ಕುಮಾರ್‌ ಫಿಲಂಸ್‌ ಲಾಂಛನದಲ್ಲಿ ಕುಮಾರ್‌ ಬಿ ನಿರ್ಮಿಸುತ್ತಿದ್ದಾರೆ.

ಲೋಹಿತ್‌ ಹೆಚ್‌ ನಿರ್ದೇಶನದ ಈ ಚಿತ್ರದ ಸಾಹಸ ಸನ್ನಿವೇಶಗಳು ಸಾಹಸಪ್ರಿಯರಿಗೆ ಹೆಚ್ಚು ಪ್ರಿಯವಾಗಲಿದೆ ಎನ್ನುವುದು ಚಿತ್ರತಂಡದ ಮಾತು.ನಾಯಕ ಪ್ರಜ್ವಲ್‌ ದೇವರಾಜ್‌ ಅಭಿನಯದ 35ನೇ ಚಿತ್ರ ” ಮಾಫಿಯಾ ‘.

ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್‌ನಲ್ಲಿ ಪ್ರಜ್ವಲ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಸಹ ಮಾಡಿಕೊಂಡಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಆಗಸ್ಟ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next