Advertisement

Video: ಪತ್ರಕರ್ತೆ ಭುಜದ ಮೇಲೆ ಕೈಹಾಕಿ ಅನುಚಿತವಾಗಿ ವರ್ತಿಸಿದ ಬಿಜೆಪಿ ನಾಯಕ ಸುರೇಶ್‌ ಗೋಪಿ

03:19 PM Oct 28, 2023 | Suhan S |

ಕೊಚ್ಚಿ: ಪತ್ರಕರ್ತೆಯ ಭುಜದ ಮೇಲೆ ಕೈಹಾಕಿ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಮಲಯಾಳಂ ನಟ ಮತ್ತು ಬಿಜೆಪಿ ನಾಯಕ ಸುರೇಶ್ ಗೋಪಿ ವಿವಾದಕ್ಕೀಡಾಗಿದ್ದಾರೆ.

Advertisement

ಕೇರಳದ ಕೋಝಿಕ್ಕೋಡ್‌ನಲ್ಲಿ ಬಿಜೆಪಿ ನಾಯಕ ಸುರೇಶ್ ಗೋಪಿ ಅವರು ಪತ್ರಕರ್ತೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸುರೇಶ್‌ ಗೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸುರೇಶ್ ಗೋಪಿ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಅವರ ಬಳಿ ಪತ್ರಕರ್ತೆ, ಕೇರಳದಿಂದ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿ ವಿಫಲವಾದ ಬಗ್ಗೆ ಕೇಳಿದ್ದಾರೆ

ಈ ಪ್ರಶ್ನಗೆ ಸುರೇಶ್‌ ಗೋಪಿ, ಪ್ರಯತ್ನ ಮಾಡೋಣ, ಕಾದು ನೋಡೋಣ” ಎಂದು ಹೇಳುತ್ತಾ ಪತ್ರಕರ್ತೆ ಭುಜದ ಮೇಲೆ ಕೈ ಹಾಕಿದ್ದಾರೆ. ಇದರಿಂದ ಪತ್ರಕರ್ತೆ ಹಿಂದೆ ಹೋಗಿದ್ದು, ಸುರೇಶ್‌ ಗೋಪಿ ಕೈಯನ್ನು ಹಿಂದಕ್ಕೆ ಎಳೆದಿದ್ದಾರೆ. ಆ ಬಳಿಕ ಮತ್ತೆ ಪತ್ರಕರ್ತೆ ಪ್ರಶ್ನೆ ಕೇಳಲು ಮುಂದೆ ಬಂದಾಗ, ಇತ್ತ ಸುರೇಶ್‌ ಗೋಪಿ ಅವರು ಮತ್ತೆ ಆಕೆಯ ಭುಜದ ಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಆದರೆ ಈ ಬಾರಿ ಪತ್ರಕರ್ತೆ ಅವರ ಕೈಯನ್ನು ಹಿಡಿದು ತಳ್ಳಿದ್ದಾರೆ.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಈ ಬಗ್ಗೆ ನಟ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಅವರ ವಿರುದ್ಧ ದೂರು ನೀಡುವುದಾಗಿ ಹೇಳಿದೆ.

Advertisement

ಅವರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸುರೇಶ್‌ ಗೋಪಿ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.

“ನಾನು ಸಾರ್ವಜನಿಕವಾಗಿ ಅಥವಾ ಜೀವನದಲ್ಲಿ ಅನುಚಿತವಾಗಿ ವರ್ತಿಸಿಲ್ಲ. ಆದರೆ ಆಕೆಗೆ ಅದರ (ಘಟನೆ) ಬಗ್ಗೆ ಏನು ಅನಿಸಿದರೂ ಅದನ್ನು ಗೌರವಿಸಬೇಕು ಎಂಬುದು ನನ್ನ ಅಭಿಪ್ರಾಯ. ಆಕೆಗೆ ಕೆಟ್ಟ ಭಾವನೆ ಇದ್ದರೆ ಅಥವಾ ಯಾವುದೇ ರೀತಿಯಲ್ಲಿ ಭಾವನಾತ್ಮಕ ಯಾತನೆ ಅನುಭವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಕ್ಷಮಿಸಿ,” ಎಂದು ಮಲಯಾಳಂನಲ್ಲಿ ಫೇಸ್‌ ಬುಕ್‌ ನಲ್ಲಿ ಅವರು ಬರೆದುಕೊಂಡಿದ್ದಾರೆ.

ಸುರೇಶ್‌ ಗೋಪಿ 2024ರ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಇದೆ.  2019 ರ ಲೋಕಸಭೆ ಚುನಾವಣೆಯಲ್ಲಿ ಹಾಗೂ 2021 ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದರು,ಆದರೆ ಎರಡೂ ಬಾರಿಯೂ ಅವರು ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next