ಬೆಂಗಳೂರು : ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ದೊಡ್ಡ ಗೌಡರ ಮನೆಗೆ ಪುಟ್ಟ ಅತಿಥಿಯ ಆಗಮನವಾಗಲಿದೆ.
ಹೌದು, ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ ಸ್ವಾಮಿ ತಂದೆಯಾಗುತ್ತಿದ್ದಾರೆ. ಅವರ ಪತ್ನಿ ರೇವತಿ ಈಗ ಐದು ತಿಂಗಳ ಗರ್ಭಿಣಿಯಾಗಿದ್ದಾರೆ. ಇಂದು ರೇವತಿ ಅವರ ಹುಟ್ಟುಹಬ್ಬವಿದ್ದು ಇಂದೇ ಈ ಸಿಹಿ ಸುದ್ದಿ ಹೊರಬಿದ್ದಿದೆ.
ಇನ್ನು ತಾವು ಅಜ್ಜ ಆಗುತ್ತಿರುವ ಸಂತಸದ ವಿಷಯವನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಮಾಧ್ಯಮವೊಂದಕ್ಕೆ ಖಾತ್ರಿ ಪಡಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರ ಹುಟ್ಟುಹಬ್ಬ ಇಂದು. ಪತ್ನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ನಿಖಿಲ್ ಇಬ್ಬರೂ ಒಟ್ಟಿಗಿರುವ ಹಳೆಯ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ನಿಖಿಲ್ ಕುಮಾರ ಸ್ವಾಮಿ ಅವರು ರಾಜಕೀಯ, ಸಿನಿಮಾ ಹಾಗೂ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣದ ಬಳಿಕ ಮತ್ತೊಂದಿಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು ಶೂಟಿಂಗ್ ನಲ್ಲಿಯೂ ಬ್ಯುಝಿಯಾಗಿದ್ದಾರೆ. ಇದರ ಜೊತೆಗೆ ಸಕ್ರಿಯ ರಾಜಕಾರಣದಲ್ಲೂ ತೊಡಿಸಿಕೊಂಡಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳ ನಡುವೆಯೂ ಬಿಡುವು ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಖುಷಿ ಕಾಣುತ್ತಿದ್ದಾರೆ.