Advertisement

Mammootty: ಎರಡು ವಿಭಿನ್ನ ಕಾಲಘಟ್ಟದ ಸಿನೆಮಾದಲ್ಲಿ ನಟ ಮಮ್ಮೂಟಿ

04:11 PM May 25, 2024 | Team Udayavani |

2024ರಲ್ಲಿ ತೆರೆಕಂಡ ಮಾಲಿವುಡ್‌ನ‌ ಚಿರ ಯೌವ್ವನದ ನಟ ಮಮ್ಮೂಟಿ ಅವರ ಅಭಿನಯದ ಮೊನೋಕ್ರೋಮ್‌ ಮಲಯಾಳ ಚಿತ್ರ “ಭ್ರಮಾ ಯುಗಮ…’ ಸಿನೆಮಾದ ಕೆಲವೊಂದು ಫ್ರೆàಮ್‌ಗಳು ಮಮ್ಮೂಟಿಯವರದ್ದೇ ಅಭಿನಯದ 1994ರಲ್ಲಿ ತೆರೆಕಂಡ “ವಿಧೇಯನ್‌’ ಚಲನಚಿತ್ರದಿಂದ ಸಾಕಷ್ಟು ಪ್ರೇರಿತವಾಗಿದೆ.

Advertisement

ಕೆಲವು ದಿನಗಳ ಹಿಂದೆ ನಮ್ಮ ಪ್ರಾಧ್ಯಾ ಪಕರಾದ ರಕ್ಷಿತ್‌ ರೈ ಸರ್‌, “ವಿಧೇಯನ್‌’ ಸಿನೆಮಾದ ಕೆಲವೊಂದು ತುಣುಕುಗಳನ್ನು ಸ್ಟುಡಿಯೋದಲ್ಲಿ ನಮಗೆ ತೋರಿಸಿ “ಭ್ರಮಾ ಯುಗಮ…’ ನೋಡಿದವರು ಒಮ್ಮೆ ಈ ಸಿನೆಮಾ ಕೂಡ ನೋಡಿ ಎಂದು ಸಲಹೆ ನೀಡಿದ್ದರು. ಹಾಗಾಗಿಯೇ ಮಲಯಾಳಂನ ಖ್ಯಾತ ನಿರ್ದೇಶಕ ಅಡೂರ್‌ ಗೋಪಾಲ್‌ ಕೃಷ್ಣನ್‌ಅವರ ನಿರ್ದೇಶನದ “ವಿಧೇಯನ್‌’ ಅವರು ಹೇಳಿದ ದಿನವೇ ನೋಡಿ ಮುಗಿಸಿದೆ.

ಮೊದಲಿಗೆ “ಭ್ರಮಾಯುಗಮ…’ ಬಗ್ಗೆ ಮಾತನಾ ಡುವುದಾದರೆ ಇದೊಂದು “ಟೆಕ್ನಿಕಲಿ ಬ್ರಿಲಿಯಂಟ್‌’ ಅನ್ನಿಸಿಕೊಳ್ಳೋ ಸಿನೆಮಾ. ಇಡೀ ಸಿನೆಮಾವನ್ನು ಮೊನೊಕ್ರೋಮ್ನಲ್ಲಿ ಚಿತ್ರಿಸಿ ಬಿಡುಗಡೆ ಮಾಡಿದ ಚಿತ್ರತಂಡದ ಧೈರ್ಯ ಮೆಚ್ಚಲೇ ಬೇಕಾಗಿದ್ದು. ಇನ್ನೂ ಇಡೀ ಚಿತ್ರವನ್ನು “ಅಯ್ಯೋ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೇ ತಪ್ಪು ಮಾಡಿಬಿಟ್ಟೆ’ ಎಂಬಂತೆ ಉದ^ರಿಸುವಂತೆ ಮಾಡುವುದು ಚಿತ್ರದ ಸಂಗೀತ ಹಾಗೂ ವಿಷುವಲ್ಸ್.

ಇಡೀ ಭ್ರಮಾಯುಗಮ್‌ ಸಿನೆಮಾದ 90ಕ್ಕೂ ಹೆಚ್ಚು ಭಾಗ ಕಾಣಿಸಿಕೊಳ್ಳೊದು ಮೂರೇ ಪಾತ್ರಗಳು. ಒಂದು ಮಮ್ಮೂಟಿ ಅವರು ನಿರ್ವಹಿಸಿದ ಕುಡುಮನ್‌ ಪೋಟ್ಟಿ, ನಿರಾಶ್ರಿತನಾದ ತೇವನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅರ್ಜುನ್‌ ಅಶೋಕನ್‌ ಹಾಗೂ ಅಡುಗೆ ಕೆಲಸದವನ ಪಾತ್ರ ನಿರ್ವಹಿಸಿರುವ ಸಿದ್ಧಾರ್ಥ್. ಆದರೆ ಚಿತ್ರದುದ್ದಕ್ಕೂ ಸುರಿಯುವ ಮಳೆಯಂತೆಯೇ, ಇಡೀ ಚಿತ್ರದುದ್ದಕ್ಕೂ ಈ ಮೂವರು ಒಬ್ಬರಿಗೊಬ್ಬರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಸ್ಪರ್ಧಿಸುತ್ತಿದ್ದಾರೋ ಎಂಬಂತೆ ವೈಟ್‌ ಆ್ಯಂಡ್‌ ಬ್ಲಾಕ್‌ ಸಿನೆಮಾದಲ್ಲೂ ಎದ್ದು ಕಾಣೋ ಬೆಳಕಿನಂತೆ ನಟಿಸಿಬಿಟ್ಟಿದ್ದಾರೆ.

ಕೇರಳ ಪ್ರಾಂತ್ಯದಲ್ಲಿ ಇರುವ ಮಾಂತ್ರಿಕ ಶಕ್ತಿಗಳಾದ ಚಾತನ್‌, ಯಕ್ಷಿಗಳ ಉÇÉೇಖ ಈ  ಚಿತ್ರದುದ್ದಕ್ಕೂ ಕಾಣಬಹುದು. ಹಾಗಾಗಿಯೇ ಇವುಗಳ ಇರುವಿಕೆಯ ಮೂಲಕವೇ ಈ ಚಿತ್ರವು “ಕಲಿಯುಗದ ಅಪಭ್ರಂಶವಾದ ಭ್ರಮಾಯುಗ’ವನ್ನೇ ಸೃಷ್ಟಿಸಿ ಬಿಡುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ. ಇನ್ನು1994ರ “ವಿಧೇಯನ್‌’ ಚಿತ್ರದಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಕಾಡುಗಳಿಗೆ ಕೇರಳದಿಂದ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರೋ ತೋಮಿ ಎಂಬಾತನು, ಕ್ರೂರಿ ಹಾಗೂ ತನ್ನ ಊರಿನಲ್ಲಿ ತನ್ನ ದುಷ್ಟ ಸ್ವಭಾವದಿಂದಾಗಿ ದ್ವೇಷ ಕಟ್ಟಿಕೊಂಡಿರೋ ಭಾಸ್ಕರ್‌ ಪಟೇಲ್‌ ಎಂಬಾತನ ಬಳಿ ಸೇರಿಕೊಂಡು ಅವನ ಆಜ್ಞೆಗಳಿಗೆಲ್ಲಾ ಇಲ್ಲ ಅನ್ನುವುದಕ್ಕೂ ಸ್ವಾತಂತ್ರ್ಯವಿಲ್ಲದಂತೆ ಅವನು ಹೇಳಿದ ಆಜ್ಞೆ ಪಾಲಿಸಿಕೊಂಡು ಹೋಗುವ ಕಥೆ. ಅವನು ಏನೆಲ್ಲಾ ಆಜ್ಞೆಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನು ನೀವೇ ಸಿನೆಮಾದಲ್ಲಿ ನೋಡುವುದು ಉತ್ತಮ.

Advertisement

ಇಡೀ “ವಿಧೇಯನ್‌’ ಸಿನೆಮಾದಲ್ಲಿ ಕೇಪಿನ ಕೋವಿ ಹಿಡಿದು ತಿರುಗುವ ಮಮ್ಮೂಟಿ ನಿಜವಾಗಿಯೂ ನಟ ರಾಕ್ಷಸನಂತೆ ರಾರಾಜಿಸುತ್ತಾರೆ. ಇನ್ನು ತೋಮಿಯ ಪಾತ್ರ ಮಾಡಿರುವ ಗೋಪಕುಮಾರ್‌ ಮಾತ್ರ “ಯಜಮಾನರೇ’ ಎನ್ನುವಾಗಲೆಲ್ಲಾ “ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎಂಬ ಗಾದೆ ಮಾತನ್ನು’ ನೆನಪಿಸುತ್ತದೆ.

ಮತ್ತೂಂದು ವಿಷಯ “ವಿಧೇಯನ್‌’ ಸಿನೆಮಾದ ಕಥೆಯು ಸಂಪೂರ್ಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಒಂದು ಬಾರಿ ಮಾತ್ರ ಕೊಡಗಿನ ಕಡೆ ಸಾಗುತ್ತದೆ) ನಡೆಯುವುದರಿಂದ ಈ ಚಿತ್ರದ ಭಾಷಾ ಬಳಕೆಯು ಶುದ್ಧ ಮಲಯಾಳಂನಲ್ಲಿರದೇ ಸ್ಥಳೀಯರು ಮಾತನಾಡುವ ಮಲಯಾಳಂ ಭಾಷೆಯ ಶೈಲಿಯಲ್ಲಿದೆ. ಹಾಗೆಯೇ ಚಿತ್ರದುದ್ದಕ್ಕೂ ಕನ್ನಡ ಸಂಭಾಷಣೆಗಳು ಕೂಡ ಯಥೇತ್ಛವಾಗಿವೆ. ಮಮ್ಮೂಟಿ ಸ್ವತಃ ಕನ್ನಡದಲ್ಲಿಯೂ ಡೈಲಾಗ್‌ ಹೇಳಿರುವುದು ವಿಶೇಷ. ಹಾಗೆಯೇ ಸುತ್ತಮುತ್ತಲಿನ ಊರುಗಳಾದ ಇಚ್ಲಂಪಾಡಿ, ಅರಿಶಿನಮಕ್ಕಿ ಸೇರಿದಂತೆ ಹಲವಾರು ಊರುಗಳ ಹೆಸರುಗಳ ಉಲ್ಲೇಖಗಳನ್ನು, ಹಾಗೂ ಶಿಶಿಲ ಮತ್ಸ್ಯ ಕ್ಷೇತ್ರದ ಮೀನುಗಳನ್ನೂ ಕೂಡ ಗಮನಿಸಬಹುದು.

ಕೊನೆಯದಾಗಿ ಹೇಳುವುದಾದರೆ ಈ ಎರಡೂ ಸಿನೆಮಾಗಳಿಗೂ ಕಥೆಯ ದೃಷ್ಟಿಯಿಂದ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಪಾತ್ರ ಪೋಷಣೆಗೆ ಒಂದಿಷ್ಟು ದೃಶ್ಯಾವಳಿಗಳನ್ನು ಎರಡೂ ಚಲನಚಿತ್ರಗಳಲ್ಲಿ ಒಂದೇ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿಯೇ ಈ ಎರಡೂ ಸಿನೆಮಾಗಳ ಚಿತ್ರಗಳಲ್ಲಿರುವ ದೃಶ್ಯಗಳು ಪ್ರೇಕ್ಷಕರು ಪರದೆಯಿಂದ ಕಣ್ಣು ಹೊರಳಿಸದಂತೆ ಮಾಡಲು ಯಶಸ್ವಿಯಾಗಿವೆ. ಈ ಎರಡೂ ಚಿತ್ರಗಳು ತಮ್ಮ ವಿಭಿನ್ನ ಕಥಾ ನಿರೂಪಣ ಶೈಲಿ ಹಾಗೂ ವಿಭಿನ್ನ ಚಿತ್ರ ನಿರ್ಮಾಣ ತಂತ್ರಗಳಿಂದಲೇ ಚಿತ್ರ ಪ್ರೇಮಿಗಳ ಮನ ಗೆದ್ದಿರುವು ದರಲ್ಲಿ ಯಾವುದೇ ಸಂಶಯವಿಲ್ಲ.

ಅನುರಾಗ್‌ ಗೌಡ

ಎಸ್‌ಡಿಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next