Advertisement

Mumbai; ಖ್ಯಾತ ನಟಿಯ ತಂದೆ ಕಟ್ಟಡದ ಟೆರೇಸ್‌ನಿಂದ ಹಾರಿ ಆತ್ಮಹ*ತ್ಯೆ

02:54 PM Sep 11, 2024 | Team Udayavani |

ಮುಂಬಯಿ:  ಬಾಂದ್ರಾದಲ್ಲಿ ಕಟ್ಟಡದ ಟೆರೇಸ್‌ನಿಂದ ಹಾರಿ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಬುಧವಾರ(ಸೆ 11) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಇದುವರೆಗೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯೆಯ ಹಿಂದಿನ ಸಂಭವನೀಯ ಕಾರಣಗಳನ್ನು ಪೊಲೀಸರು ಇನ್ನೂ ನಿರ್ಧರಿಸಿಲ್ಲ.ಅಧಿಕಾರಿಗಳ ಪ್ರಕಾರ ಆಕೆಯ ತಂದೆ ಕಠಿನ ನಿರ್ಧಾರ ತಳೆಯುವ ವೇಳೆ ನಟಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next