Advertisement

ಹಿರಿಯ ಕಲಾವಿದೆ ಕೃಷ್ಣಕುಮಾರಿ ನಿಧನ

06:50 AM Jan 25, 2018 | |

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಲನಚಿತ್ರ ಹಿರಿಯ ಕಲಾವಿದೆ ಕೃಷ್ಣಕುಮಾರಿ (83)
ಬುಧವಾರ ಮುಂಜಾನೆ ನಿಧನರಾಗಿದ್ದಾರೆ.

Advertisement

ಮೂಳೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಅನಾರೋಗ್ಯ ತೀವ್ರಗೊಂಡು ಕೊನೆಯುಸಿರೆಳೆದಿದ್ದಾರೆ. ಅನೇಕ ಚಿತ್ರಗಳಲ್ಲಿ ನಟಿಸಿರುವ ಅವರು, “ಇಂಡಿಯನ್‌ ಎಕ್ಸ್‌ ಪ್ರಸ್‌’ ಪತ್ರಿಕೆಯ ಮಾಜಿ ಸಂಪಾದಕ ಅಜಯ… ಮೋಹನ್‌ ಖೈತಾನ್‌ ಅವರನ್ನು ವಿವಾಹವಾಗಿದ್ದರು. ಪುತ್ರಿ ದೀಪಿಕಾ, ಅಳಿಯ ವಿಕ್ರಮ್‌ ಮತ್ತು ಮೊಮ್ಮಗ ಪವನ್‌ ಜೊತೆಗೆ ಕೃಷ್ಣಕುಮಾರಿ ಬೆಂಗಳೂರಿನಲ್ಲಿ ನೆಲೆಸಿದ್ದರು. 1951ರಲ್ಲಿ ಬಿಡುಗಡೆಯಾದ “ನವ್ವುತೆ ನವರತ್ನಾಲು’ ಚಿತ್ರದಿಂದ ಕೃಷ್ಣಕುಮಾರಿ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು. 60ರ ದಶಕದ ಖ್ಯಾತ ನಟಿ ಎನಿಸಿಕೊಂಡಿದ್ದ ಅವರು, ತಮಿಳು, ಕನ್ನಡ ಸೇರಿದಂತೆ ಮಲಯಾಳಂ ಭಾಷಾಚಿತ್ರಗಳಲ್ಲೂ ನಟಿಸಿದ್ದರು. ತೆಲುಗು ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಭಕ್ತ ಕನಕದಾಸ, ಸ್ವರ್ಣಗೌರಿ, ಸತಿ ಸಾವಿತ್ರಿ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ಹಿರಿಯ ತಾರೆ “ಸಾಹುಕಾರ್‌ ಜಾನಕಿ’ ಸಹೋದರಿ ಕೂಡ ಹೌದು.

ನಾವಿಬ್ಬರು ಗೆಳತಿಯರಂತಿದ್ದೆವು. ಕಷ್ಟ ಸುಖಗಳಿಗೆ ಭಾಗಿಯಾಗುತ್ತಿದ್ದೆವು. ಕೃಷ್ಣಕುಮಾರಿ ಯಾರಿಗೇ ಆಗಲಿ, ನೇರವಾಗಿ ಮಾತಾಡುವ ಸ್ವಭಾವದವಳಾಗಿರಲಿಲ್ಲ. ಎಷ್ಟೇ ಕಷ್ಟವಿದ್ದರೂ ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಅವಳನ್ನು ಕಳೆದುಕೊಂಡಿದ್ದು ತುಂಬಾ ದುಃಖ ತಂದಿದೆ. ನನ್ನ ಶರೀರದ ಒಂದು ಭಾಗ ಕಳೆದು ಹೋದಂತಾಗಿದೆ.
–  ಸಾಹುಕಾರ್‌ ಜಾನಕಿ, ಸಹೋದರಿ

Advertisement

Udayavani is now on Telegram. Click here to join our channel and stay updated with the latest news.

Next