Advertisement

ಚೇಸಿಂಗ್ ವೇಳೆ ಅವಘಡ; ನಟ ಕೋಮಲ್, ಯೋಗಿ ಅಪಾಯದಿಂದ ಪಾರು

02:23 PM Aug 30, 2017 | Team Udayavani |

ಚೆನ್ನೈ: ಕೆಂಪೇಗೌಡ 2 ಸಿನಿಮಾದ ಚಿತ್ರೀಕರಣದ ವೇಳೆ ನಾಯಕ ನಟನಾಗಿ ಅಭಿನಯಿಸುತ್ತಿದ್ದ ಕೋಮಲ್ ಹಾಗೂ ಸಹನಟ ಯೋಗಿ ಚೇಸಿಂಗ್ ದೃಶ್ಯದ ವೇಳೆ ಅವಘಡ ಸಂಭವಿಸಿದ ಘಟನೆ ಬುಧವಾರ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದಿದೆ ಎಂದು ಖಾಸಗಿ ಟಿವಿ ಚಾನೆಲ್ ವರದಿ ಮಾಡಿದೆ.

Advertisement

ಮಹಾಬಲಿಪುರಂನ ಮರಳುಗಾಡು ಪ್ರದೇಶದಲ್ಲಿ ಬಳಿ ಕೆಂಪೇಗೌಡ 2 ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆಲ್ಟೇರಿಯನ್ ವೆಹಿಕಲ್ ನಲ್ಲಿ ನಟ ಕೋಮಲ್ ಹಾಗೂ ಯೋಗಿ ಅವರು ಚೇಸಿಂಗ್ ದೃಶ್ಯದ ವೇಳೆ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದ ಘಟನೆ ನಡೆದಿದೆ. ಇಬ್ಬರನ್ನೂ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಘಟನೆಯಲ್ಲಿ ಕೋಮಲ್ ಹಾಗೂ ಯೋಗಿಗೆ ಯಾವುದೇ ಗಂಭೀರ ಗಾಯವಾಗಿಲ್ಲ, ಇಬ್ಬರು ನಟರು ಆರೋಗ್ಯವಾಗಿದ್ದಾರೆ. ಗಾಬರಿಪಡಬೇಕಿಲ್ಲ ಎಂದು ಕೆಂಪೇಗೌಡ 2 ಚಿತ್ರ ತಂಡ ಪ್ರತಿಕ್ರಿಯೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next