Advertisement

ಕೋವಿಡ್ ನಿಯಮ ಉಲ್ಲಂಘನೆ : ಖ್ಯಾತ ನಟ ಸೇರಿ 34 ಜನರ ವಿರುದ್ಧ ಪ್ರಕರಣ

03:49 PM Apr 29, 2021 | Team Udayavani |

ಮುಂಬೈ : ಕೋವಿಡ್ ನಿಯಮ ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿದ್ದ ಬಾಲಿವುಡ್ ನಟ ಜಿಮ್ಮಿ ಶೇರ್ ಗಿಲ್ ಮತ್ತು ನಿರ್ದೇಶಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಪಂಜಾಬಿನಲ್ಲಿ ನಡೆದಿದೆ.

Advertisement

ದೇಶದಲ್ಲಿ ಕೋವಿಡ್ ಎರಡನೇ ಅಲೆ ಕೈ ಮೀರಿದೆ. ಕೋವಿಡ್ ಆರ್ಭಟ ಹತೋಟಿಗೆ ತರಲು ಸರ್ಕಾರಗಳು ಕರ್ಫ್ಯೂ ಜಾರಿ ಮಾಡಿದೆ. ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಿದೆ. ಆದರೆ, ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿದ ಚಿತ್ರತಂಡ, ಪಂಜಾಬ್ ನ ಲೂಧಿಯಾನದಲ್ಲಿ ವೆಬ್ ಸೀರಿಸ್ ಚಿತ್ರೀಕರಣ ಮಾಡುತ್ತಿದ್ದರು.

ನಟ ಜಿಮ್ಮಿ ಶೇರ್ ಗಿಲ್ ಮತ್ತು ವೆಬ್ ಸೀರಿಸ್ ನಿರ್ದೇಶಕ ಈಶ್ವರ್ ನಿವಾಸ್ ಸೇರಿದಂತೆ ಚಿತ್ರತಂಡದ 34 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಯುವರ್ ಹಾನರ್ ಎನ್ನುವ ವೆಬ್ ಸರಣಿ ಚಿತ್ರೀಕರಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅನುಮತಿ ಇಲ್ಲದೆ ಖಾಸಗಿ ಶಾಲೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದರು

ರಾತ್ರಿ 8 ಗಂಟೆ ಸುಮಾರಿಗೆ 150 ಜನ ಸಿಬ್ಬಂದಿ ಖಾಸಗಿ ಶಾಲೆಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ನಟ, ನಿರ್ದೇಶ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next