Advertisement

ಕೇವಲ ಅರ್ಧ ಗಂಟೆಯಲ್ಲಿ ಆಕ್ಸಿಜನ್ ತಲುಪಿಸಿ ವ್ಯಕ್ತಿಯ ಪ್ರಾಣ ಉಳಿಸಿದ ನಟ ಜಗ್ಗೇಶ್

07:19 PM May 01, 2021 | Team Udayavani |

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಕೋವಿಡ್ ಸಮಯದಲ್ಲಿ ತೊಂದರೆಯಲ್ಲಿದ್ದವರಿಗೆ ಸಹಾಯದ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಸಾಕಷ್ಟು ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ.

Advertisement

ಕೋವಿಡ್ ಸೋಂಕಿನಿಂದ ಬಳಲುತ್ತಿರುವ ನಾಗೇಂದ್ರ ಭಟ್ ಎಂಬುವರಿಗೆ ಆಕ್ಸಿಜನ್ ಬೇಕಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಸಹ ಅವರಿಗೆ ಆಕ್ಸಿಜನ್ ಸಿಕ್ಕಿರಲಿಲ್ಲ. ಈ ವೇಳೆ ಭಟ್ ಅವರ ಮಗಳು ಜಗ್ಗೇಶ್ ಅವರ ಸಹಾಯ ಕೋರಿದ್ದಾರೆ. ಕೂಡಲೇ ಸ್ಪಂದಿಸಿರುವ ಜಗ್ಗೇಶ್ ಅರ್ಧ ಗಂಟೆಯಲ್ಲಿ ಆಕ್ಸಿಜನ್ ಸಿಲಿಂಡರ್ ತಲುಪುವಂತೆ ಮಾಡಿದ್ದಾರೆ. ಒಂದೆರಡು ಗಂಟೆ ತಡವಾಗಿದ್ದರೂ ಸಹ ನಾಗೇಂದ್ರ ಭಟ್ ಅವರ ಜೀವಕ್ಕೆ ಅಪಾಯವಿತ್ತಂತೆ. ಆದರೆ, ಜಗ್ಗೇಶ ಅವರ ಸೇವಾ ಮನೋಭಾವನೆಯಿಂದಾಗಿ ಒಂದು ವಿಘ್ನ ತಪ್ಪಿದಂತಾಗಿದೆ.

ಇನ್ನು ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಇದರಿಂದ ಅನೇಕ ಸೆಲೆಬ್ರಿಟಿಗಳು ಮನೆಯಲ್ಲೇ ಕೂತಿದ್ದಾರೆ. ಆದರೆ, ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ಮನೆಯಿಂದ ಹೊರಬಂದು ಕೊರೊನಾ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಇದಕ್ಕೆ ನಟ ಜಗ್ಗೇಶ್​ ಕೂಡ ಹೊರತಾಗಿಲ್ಲ.

ಅವರು ಕಳೆದ 20 ದಿನಗಳಿಂದ ಕೊರೊನಾ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ.ಇತ್ತೀಚೆಗೆ ಜಗ್ಗೇಶ್​ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ, ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ. ಕೊರೊನಾ ರೋಗಿ ಅಡ್ಮಿಟ್ ಆದ 2-3ದಿನಕ್ಕೆ ಸಾವು ಸಂಭವಿಸುತ್ತಿದೆ. ವೈದ್ಯರು ಯಾವ ರೀತಿ ಚಿಕಿತ್ಸೆ ನೀಡುತ್ತಾರೆ ಎಂಬುದು ಬಂಧುಗಳಿಗೆ ತಿಳಿಯದು. ಸಾವಾಗಿದೆ ಎಂದು ತಿಳಿಸುತ್ತಾರೆ ಆದರೆ ಮುಖ ನೋಡಲಾಗದು. ಕೆಲ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದರು.

Advertisement

ಈ ಟ್ವೀಟ್​ಗೆ ನಿಮಗೆ ಚಿಕಿತ್ಸೆ ಬಗ್ಗೆ ಅನುಮಾನ ಇದ್ದರೆ PPE ಕಿಟ್​ ಹಾಕಿಕೊಂಡು ಒಳಗೆ ಹೋಗಿ ನೋಡಿ ಬನ್ನಿ ಎಂದು ಅಭಿಮಾನಿಯೋರ್ವ ಕಮೆಂಟ್​ ಹಾಕಿದ್ದ. ಇದಕ್ಕೆ ಜಗ್ಗೇಶ್​ ಉತ್ತರ ನೀಡಿದ್ದಾರೆ.

20 ದಿನಗಳಿಂದ ಅದೇ ಕೆಲಸ ಮಾಡುತ್ತಿದ್ದೇನೆ. ನಿಮಗೆ ಧೈರ್ಯ ಇದ್ದರೆ ಬರಬಹುದು, ನಾನು ಕರೆದುಕೊಂಡು ಹೋಗುವೆ. ನಾರಾಯಣ ಆಸ್ಪತ್ರೆಯಲ್ಲಿ ಆಮ್ಲಜನಕ ಪಡೆದು ದೇವೆಗೌಡ ಬಂಕ್ ಹತ್ತಿರ ಕೊರೊನಾ ರೋಗಿಗೆ ಕೊಟ್ಟು ಬರುತ್ತಿರುವೆ. ನಿಮಗೆ ಆಗುತ್ತ ನನ್ನ ಸಹಾಯಕ್ಕೆ ಬರಲು ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ತಾವು ಎನು ಮಾಡುತ್ತಿದ್ದೇವೆ ಎಂಬುದನ್ನು ಜಗ್ಗೇಶ್​ ಹೇಳಿಕೊಂಡಿದ್ದಾರೆ. ಜಗ್ಗೇಶ್​ ಮಾಡುತ್ತಿರುವ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next