Advertisement

Gurucharan Singh: ನಾಪತ್ತೆಯಾಗಿದ್ದ ಕಿರುತೆರೆ ನಟ ಮನೆಗೆ ವಾಪಾಸ್; ಹೋಗಿದ್ದೆಲ್ಲಿಗೆ?

10:15 AM May 18, 2024 | Team Udayavani |

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಿರುತೆರೆ ನಟ ಗುರುಚರಣ್ ಸಿಂಗ್ ಶುಕ್ರವಾರ (ಮೇ.17 ರಂದು) ಮನೆಗೆ ಮರಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಏಪ್ರಿಲ್ 24 ರಿಂದ ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದರು. ಈ ಕುರಿತು ದೆಹಲಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿ, ನಟನ ಪತ್ತೆಗಾಗಿ ತನಿಖೆ ನಡೆಸುತ್ತಿದ್ದರು.

ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಒಂದಾದ ‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ದಲ್ಲಿ ರೋಷನ್ ಸಿಂಗ್ ಸೋಧಿ ಪಾತ್ರವನ್ನು ನಿರ್ವಹಿಸಿರುವ ನಟ ಗುರುಚರಣ್ ಸಿಂಗ್ ನಾಪತ್ತೆಯಾದ ಬಳಿಕ ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಇದು ಮನೆಯವರ ಆತಂಕಕ್ಕೆ ಕಾರಣವಾಗಿತ್ತು.

ಘಟನೆ ಸಂಬಂಧ ಗುರುಚರಣ್ ಸಿಂಗ್ ಅವರ ತಂದೆ ಹರ್ಗಿತ್ ಸಿಂಗ್ ಅವರು ಶುಕ್ರವಾರ (ಏ. 26) ದೆಹಲಿಯ ಪಾಲಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇದೀಗ ನಟ ಗುರುಚರಣ್‌ ಮನೆಗೆ ಮರಳಿರುವುದಾಗಿ ಪೊಲೀಸರು ಹೇಳಿದ್ದಾರೆ. ಗುರುಚರಣ್‌ ಅವರು ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ಅವರು ಹೇಳಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ಕೆಲ ದಿನಗಳಲ್ಲಿ ಅವರು, ಅಮೃತಸರ ಮತ್ತು ಲುಧಿಯಾನದಂತಹ ಅನೇಕ ನಗರಗಳ ಗುರುದ್ವಾರದಲ್ಲಿ ನಿಂತಿದ್ದರು. ಆ ಬಳಿಕ ಮನೆಗೆ ಮರಳಬೇಕೆಂದು ಅರಿತುಕೊಂಡು ಮನೆಗೆ ವಾಪಾಸ್‌ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗುರುಚರಣ್‌ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಹಲವರ ಬಳಿ ಸಾಲವನ್ನು ಮಾಡಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next