ಚಂಡಿಗಢ: ಹಿರಿಯ ಪಂಜಾಬಿ ಮತ್ತು ಹಿಂದಿ ಸಿನಿಮಾದ ನಟ-ಕಮ್-ನಿರ್ದೇಶಕ ಮಂಗಲ್ ಧಿಲ್ಲೋನ್ ಭಾನುವಾರ (ಜೂ.11 ರಂದು) ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಲುಧಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ನಟನ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಮಂಗಲ್ ಧಿಲ್ಲೋನ್ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಸಿಖ್ ಕುಟುಂಬದಲ್ಲಿ ಜನಿಸಿದರು. ಆರಂಭದಲ್ಲಿ ದಿಲ್ಲಿಯಲ್ಲಿ ರಂಗಭೂಮಿಯಲ್ಲಿ ಗುರುತಿಸಿಕೊಂಡ ಅವರು, 80ರ ದಶಕದಲ್ಲಿ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟರು. 1986 ರಲ್ಲಿ ʼ ಕಥಾ ಸಾಗರ್ʼ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಆ ಬಳಿಕ ʼ ಬುನಿಯಾದ್ʼ ಕಾರ್ಯಕ್ರಮದಲ್ಲಿ ಜನರನ್ನು ಸೆಳೆದರು. ʼಜುನೂನ್ʼ, ʼಕಿಸ್ಮತ್ʼ, ʼದಿ ಗ್ರೇಟ್ ಮರಾಠʼ, ʼಪ್ಯಾಂಥರ್ʼ, ʼಘುಟಾನ್ʼ, ʼಸಾಹಿಲ್ʼ, ʼಮೌಲಾನಾʼ ʼಆಜಾದ್ʼ, ʼಮುಜ್ರಿಮ್ ಹಜಿರ್ʼ, ʼರಿಶ್ತಾ, ʼಯುಗ್ʼ ಮತ್ತು ʼನೂರ್ಜಹಾನ್ʼ ಇತ್ಯಾದಿ ಟಿವಿ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಪಟ್ಟು ಬಿಡದ ಪಾಕ್: ಹೈಬ್ರಿಡ್ ಮಾಡೆಲ್ ಗೆ ಒಪ್ಪಿದ ಎಸಿಸಿ; 2 ದೇಶದಲ್ಲಿ ನಡೆಯಲಿದೆ Asia cup
ʼಖೂನ್ ಭಾರಿ ಮಾಂಗ್ʼ, ʼಜಖ್ಮಿ ಔರತ್ʼ, ʼದಯಾವನ್ʼ, ʼಕಹಾನ್ ಹೈ ಕಾನೂನ್ʼ, ʼನಾಕಾ ಬಂದಿʼ, ʼಅಂಬಾʼ, ʼಅಕೈಲಾʼ, ʼಜನಶೀನ್ʼ, ʼಟ್ರೇನ್ ಟು ಪಾಕಿಸ್ತಾನ್ʼ, ʼದಲಾಲ್ʼ ಇತ್ಯಾದಿ ಸಿನಿಮಾದಲ್ಲಿ ನಟಿಸಿರುವ ಅವರು, 2017 ರಲ್ಲಿ ಬಂದ ʼತೂಫಾನ್ ಸಿಂಗ್ʼ ಸಿನಿಮಾದಲ್ಲಿ ʼಲಾಖಾʼ ಎನ್ನುವ ಪಾತ್ರದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.