Advertisement

ಇದು ಧರ್ಮಕೀರ್ತಿರಾಜ್‌ ದಿಲ್ ಸೇ…

10:21 AM Feb 15, 2020 | sudhir |

ಬಹುಶಃ ಈ ಚಿತ್ರ ಇಂದಿಗೂ ಎವರ್‌ಗ್ರೀನ್‌. ಹೌದು, ಶಾರುಖ್‌ ಖಾನ್‌ ಅಭಿನಯದ ಈ ಚಿತ್ರ ಎರಡು ದಶಕಗಳ ಹಿಂದೆಯೇ ಅದ್ಭುತ ಯಶಸ್ಸು ಪಡೆದ ಚಿತ್ರ. ಅದೇ “ದಿಲ್‌ ಸೇ’ ಹೆಸರಲ್ಲಿ ಇದೀಗ ಕನ್ನಡದಲ್ಲೂ ಚಿತ್ರವೊಂದು ಸೆಟ್ಟೇರಿದೆ. ಹೌದು, “ದಿಲ್‌ ಸೇ’ ಚಿತ್ರಕ್ಕೆ ಇತ್ತೀಚೆಗೆ ಚಾಲನೆ ದೊರೆತಿದೆ. ರಾಕ್‌ ಮಾದೇಶ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರದೇ.

Advertisement

ಪ್ರೀತಿ ಅನ್ನೋದು ಎರಡು ಹೃದಯಗಳು ಬೆರೆತರೆ ಮಾತ್ರ ಎಂಬ ವಿಷಯ ಇಟ್ಟುಕೊಂಡು ಕಥೆ ಹೆಣೆದಿದ್ದಾರಂತೆ. ಬೆಂಗಳೂರು, ಮಂಗಳೂರು, ಕಾಸರಗೋಡು, ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಚಿತ್ರಕ್ಕೆ ಧರ್ಮಕೀರ್ತಿರಾಜ್‌ ಹೀರೋ. ಓದಿನ ಜೊತೆಯಲ್ಲೇ ಕೆಲಸ ಮಾಡುವ ಹುಡುಗನಾಗಿ ಧರ್ಮ ಕಾಣಿಸಿಕೊಂಡಿದ್ದಾರೆ. ಇನ್ನು, ಚೆನ್ನೈ ಮೂಲದ ಶ್ರೀಪಲ್ಲವಿ ನಾಯಕಿಯಾಗಿದ್ದಾರೆ. ಚಿತ್ರದ ಇನ್ನೊಬ್ಬ ನಾಯಕಿಗೆ ಹುಡುಕಾಟ ನಡೆಯುತ್ತಿದೆ. ಅನಿಲ್‌ ಸಿದ್ದು ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಶೋಕ್‌, ಅಮಿತ್‌, ಮಡೇನೂರ್‌ ಮನು, ನಂದಿನಿ, ಜಯರಾಮಣ್ಣ, ವಂದನಾಶೆಟ್ಟಿ, ಬಸು ಹಿರೇಮಠ, ಸದಾನಂದ ಇತರರು ಇದ್ದಾರೆ. ಚಿತ್ರದ ನಾಲ್ಕು ಗೀತೆಗಳಿಗೆ ವಿ. ಮನೋಹರ್‌ ಸಂಗೀತ ಒದಗಿಸುತ್ತಿದ್ದಾರೆ.

ಕಿರಣ್‌ಕುಮಾರ್‌ ಛಾಯಾಗ್ರಹಣ ಮಾಡಿದರೆ, ಲಿಂಗರಾಜು ಸಂಕಲನವಿದೆ. ಕೆ.ಹರೀಶ್‌ ಸಂಭಾಷಣೆ ಬರೆದಿದ್ದಾರೆ. ಹಾವೇರಿ ಮೂಲದ ಉದ್ಯಮಿ ಶಿವಶರಣಗೌಡ್ರು ನಿರ್ಮಾಪಕರಾಗಿದ್ದಾರೆ. ಅವರಿಗೆ ಇದು ಹೊಸ ಪ್ರಯತ್ನ. ಇತ್ತೀಚೆಗೆ ನಡೆದ ಮಹೂರ್ತ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್‌ ಪ್ರಥಮ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next