Advertisement
ನನಗೆ ಕೋವಿಡ್ 19 ಪಾಸಿಟಿವ್ ಇದೆ ಎಂಬುದು ಸುಳ್ಳು ಸುದ್ದಿ:ವಿಜಯಲಕ್ಷ್ಮಿ ಅವರ ಟ್ವೀಟ್ ಸಾರಾಂಶ: ನನಗೆ ಕೋವಿಡ್ 19 ವೈರಸ್ ಪಾಸಿಟಿವ್ ಇದೆ ಎಂದು ಹಬ್ಬಿರುವ ಊಹಾಪೋಹ ನಂಬಬೇಡಿ. ಅದು ಸುಳ್ಳು. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಸುರಕ್ಷಿತವಾಗಿರಿ” ಎಂದು ತಿಳಿಸಿದ್ದರು.
ಡಿ ಬಾಸ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೋವಿಡ್ 19 ಪಾಸಿಟಿವ್ ಇದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಊಹಾಪೋಹ ವಿಜಯಲಕ್ಷ್ಮಿ ಅವರ ಕಿವಿಗೆ ತಲುಪಿದ್ದರಿಂದ, ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.