Advertisement

ತಪ್ಪು ಮಾಹಿತಿ: ಬಾಲಿವುಡ್‌ ನಟ ಅರ್ಷದ್‌ ವಾರ್ಸಿ ಸೇರಿ 45 ಮಂದಿಗೆ ಸೆಬಿ ನಿಷೇಧ

10:16 PM Mar 02, 2023 | Team Udayavani |

ನವದೆಹಲಿ: ಬಾಲಿವುಡ್‌ ನಟ ಅರ್ಷದ್‌ ವಾರ್ಸಿ, ಅವರ ಪತ್ನಿ ಮಾರಿಯಾ ಗೊರೆಟ್ಟಿ ಸೇರಿ ಒಟ್ಟು 45 ವ್ಯಕ್ತಿಗಳನ್ನು ಸೆಬಿ ನಿಷೇಧಿಸಿದೆ. ಈ ವ್ಯಕ್ತಿಗಳು ಇನ್ನು ಭದ್ರತಾ ಮಾರುಕಟ್ಟೆಯ (ಬಾಂಡ್‌ಗಳು, ನಿರ್ದಿಷ್ಟ ಷೇರುಗಳು, ಸ್ಟಾಕ್ಸ್‌, ಇಟಿಎಫ್) ವ್ಯವಹಾರಗಳಲ್ಲಿ ಪಾಲ್ಗೊಳ್ಳುವಂತಿಲ್ಲವೆಂದು ಹೇಳಿದೆ.

Advertisement

ಷೇರುಗಳ ಬೆಲೆಗಳಲ್ಲಿ ಕಳ್ಳ ಮಾಹಿತಿ ನೀಡಿದ್ದೇ ಇದಕ್ಕೆ ಕಾರಣ. ವಾರ್ಸಿ ಮತ್ತವರ ಪತ್ನಿ, ತಮ್ಮ ಯೂಟ್ಯೂಬ್‌ ವಾಹಿನಿ ಮೂಲಕ ಸಾಧನಾ ಬ್ರಾಡ್‌ಕಾಸ್ಟ್‌ ಲಿ., ಶಾರ್ಪ್‌ಲೈನ್‌ ಬ್ರಾಡ್‌ಕಾಸ್ಟ್‌ ಲಿ.ನ ಷೇರುಗಳನ್ನು ಕೊಳ್ಳುವಂತೆ ಮಾಡಲು, ತಪ್ಪು ಮಾಹಿತಿಯಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಈ ಷೇರುಗಳನ್ನು ಕೊಳ್ಳಲೆಂದೇ ಅರ್ಷದ್‌ ಮತ್ತಿತರರು ಆಸೆ ಹುಟ್ಟಿಸಿದ್ದಾರೆಂದು ಹಲವರು ಸೆಬಿಗೆ ದೂರು ನೀಡಿದ್ದಾರೆ. ಹೀಗಾಗಿ ಸೆಬಿ ಸಂಬಂಧಪಟ್ಟ ವ್ಯಕ್ತಿಗಳು ಗಳಿಸಿದ ಒಟ್ಟಾರೆ 54 ಕೋಟಿ ರೂ. ಲಾಭವನ್ನೂ ಮುಟ್ಟುಗೋಲು ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next