Advertisement
ಗುರುವಾರ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ವಾಸ್ತುಶಿಲ್ಪ ಹಾಗೂ ಮರದ ಕೆತ್ತನೆ ವಿನ್ಯಾಸವನ್ನು ವೀಕ್ಷಿಸುವರು. ಹನುಮಂತನ ದೇವಸ್ಥಾನದ ಏಕಶಿಲಾ ಹನುಮನ ವಿಗ್ರಹ ಸುಮಾರು 35 ಅಡಿ ಎತ್ತರವಿದ್ದು, ನಿರ್ಮಾಣಕ್ಕೆ 27 ಟನ್ ಕಬ್ಬಿಣವನ್ನು ಬಳಸಲಾಗಿದೆ. ಕರ್ನಾಟಕದ ಶಿಲ್ಪಿ ಅಶೋಕ್ ಗುಡಿಗಾರ್ ಅವರ ನೇತೃತ್ವದಲ್ಲಿ ಈ ವಿಗ್ರಹನ್ನು ಕೆತ್ತಲಾಗಿದೆ.
ಹನುಮಾನ್ ದೇವಾಲಯದ ಕೆತ್ತನೆ ಕೆಲಸವನ್ನು ಈಗಾಗಲೇ ಮಂಗಳೂರಿನ ಆರ್ಕಿಟೆಕ್ಚರ್ ಸಂತೋಷ್ ಶೆಟ್ಟಿ ಬೋಳಾರ ಅವರಿಗೆ ವಹಿಸಿದ್ದಾರೆ. ಈಗಾಗಲೇ ನಗರದ
ಹಲವು ಕಟ್ಟಡಗಳ ವಿನ್ಯಾಸ ಮಾಡಿರುವ ಸಂತೋಷ್ ಅವರು ಪೊಳಲಿ ದೇವಸ್ಥಾನದ ಮರದ ಕೆತ್ತನೆಯನ್ನು ತೋರಿಸಲು ಸರ್ಜಾ ಅವರನ್ನು ನಗರಕ್ಕೆ ಕರೆಸಿಕೊಂಡಿದ್ದಾರೆ. ಇಷ್ಟವಾದರೆ ಅಳವಡಿಕೆ
ಸರ್ಜಾ “ಉದಯವಾಣಿ’ ಜತೆಗೆ ಮಾತನಾಡಿ, “ಪೊಳಲಿಯ ಮರದ ಕೆತ್ತನೆ ವೀಕ್ಷಿಸಲಿದ್ದು, ಇಷ್ಟವಾದರೆ ಅಳವಡಿಸುವುದಾಗಿ ತಿಳಿಸಿದರು. ಏಕಶಿಲಾ ಹನುಮ ವಿಗ್ರಹವುಳ್ಳ ದೇವಸ್ಥಾನದ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿದ್ದು, ಫೆಬ್ರವರಿಯಲ್ಲಿ ಕುಂಭಾಭಿಷೇಕ ಮಾಡಲಾಗುವುದು. ಬಳಿಕ ಭಕ್ತರಿಗೆ ಪೂಜೆ ಮಾಡುವ ಅವಕಾಶವನ್ನೂ ನೀಡಲಾಗುವುದು ಎಂದರು.
Related Articles
“ತುಳುವಿನಲ್ಲೂ ಚಿತ್ರ ನಿರ್ಮಿಸುವ ಬಗ್ಗೆ ಯೋಚಿಸಿದ್ದೇನೆ. ಈ ಬಗ್ಗೆ 15 ದಿನಗಳ ಹಿಂದೆಯಷ್ಟೇ ಚರ್ಚೆ ಮಾಡಿದ್ದೆ. ಮೊದಲ ಬಾರಿಗೆ ಉದಯವಾಣಿಯಲ್ಲಿ ಈ ವಿಚಾರ
ವನ್ನು ಬಹಿರಂಗಪಡಿಸುತ್ತೇನೆ. ಶೀಘ್ರ ದಲ್ಲೇ ಈ ಬಗ್ಗೆ ಸಂಪೂರ್ಣ ಚಿತ್ರಣ ನೀಡಲಿದ್ದೇನೆ’ ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.
Advertisement
– ಪ್ರಜ್ಞಾ ಶೆಟ್ಟಿ