Advertisement

ಕೆಲಸ ಕಿತ್ತುಕೊಂಡ ಕ್ರೂರಿ ಕೋವಿಡ್: ರಸ್ತೆ ಬದಿ ಮೀನು ಮಾರುತ್ತಿರುವ ನಟ

03:53 PM Jul 06, 2021 | Team Udayavani |

ಕೋಲ್ಕತಾ: ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿದ್ದ ಬಂಗಾಳಿಯ ಅರಿಂದಮ್ ಪ್ರಮಣಿಕ್, ಇದೀಗ ಅವಕಾಶಗಳಿಲ್ಲದೆ ಮೀನು ಮಾರಾಟ ಮಾಡುತ್ತಿದ್ದಾರೆ. ಒಂದು ಟೈಮಿನಲ್ಲಿ ಬ್ಯುಝಿ ಕಲಾವಿದನಾಗಿದ್ದ ಈತ ಇದೀಗ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಪ್ರತಿಭಾವಂತ ನಟನೆಂದೆ ಗುರುತಿಸಿಕೊಂಡಿದ್ದ ಅರಿಂದಮ್ ಬದುಕು ಹೀಗೆ ಬೀದಿಗೆ ಬಿದ್ದಿರುವುದಕ್ಕೆ ಕಾರಣ ಪಾಪಿ ಕೋವಿಡ್.

Advertisement

ಹೌದು, ಕ್ರೂರಿ ಕೋವಿಡ್ ಅದೆಷ್ಟೋ ಜನರ ಕೆಲಸ ಕಸಿದುಕೊಂಡು ಬೀದಿಗೆ ನೂಕಿತು. ಒಂದು ತುತ್ತಿನ ಊಟಕ್ಕೆ ಪರಿತಪಿಸುವಂತಹ ಪರಸ್ಥಿತಿ ತಂದೊಡ್ಡಿತು. ಕೋವಿಡ್ ಎರಡನೇ ಅಲೆಯಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡವು. ಇದರಿಂದ ನಟ ಅರಿಂದಮ್ ಗೂ ಕೂಡ ಕೆಲಸ ಇಲ್ಲದಂತಾಯಿತು. ಹೀಗಾಗಿ ಮನೆಯಲ್ಲಿ ಕುಳಿತುಕೊಳ್ಳಲಾಗದೆ ಮೀನು ಮಾರಾಟ ಮಾಡುತ್ತಿದ್ದಾರೆ.

ತಮ್ಮ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಅರಿಂದಮ್, ‘ನನ್ನ ತಂದೆ ಪೂರ್ವ ಬುರ್ದ್ವಾನ್ ಜಿಲ್ಲೆಯ ಮೇಮರಿಯಲ್ಲಿ ತರಕಾರಿಗಳನ್ನು ಮಾರುತ್ತಿದ್ದರು. ಆದರೆ ನಾನು ಯಾವಾಗಲೂ ಯಶಸ್ವಿ ನಟನಾಗಬೇಕೆಂದು ಕನಸು ಕಾಣುತ್ತಿದ್ದೆ. ನಾನು ಆ ವೃತ್ತಿಗೆ ಕಾಲಿಟ್ಟ ದಿನದಿಂದ ನನ್ನ ತಂದೆ ಆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ನಾನು ಎಲ್ಲರಿಗೂ ಉದಾಹರಣೆಯಾಗಿದ್ದೆ. ಆದರೆ ಇಂದು ಕರೋನಾದ ಕಾರಣ ನಟನೆಯಲ್ಲಿ ನನಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ನನ್ನ ಕುಟುಂಬವನ್ನು ಪೋಷಿಸಲು ನಾನು ಮೀನು ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next