ಶಿರಸಿ: ಜೊತೆ ಜೊತೆಯಲಿ ಧಾರವಾಹಿಯ ಪ್ರಸಿದ್ದ ಆರ್ಯವರ್ಧನ್, ಚಲನಚಿತ್ರ ತಾರೆ ಅನಿರುದ್ದ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತಿ ಪ್ರದೇಶ ತ್ಯಾಜ್ಯಗಳ ಕುರಿತು ತಮ್ಮ ಫೆಸ್ ಬುಕ್ ಗೋಡೆಯಲ್ಲಿ ಚಿತ್ರ ಹಾಕಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸ್ವಚ್ಛತೆಗಾಗಿ ನಾನೂ ಸಹಭಾಗಿ ಎಂಬ ಅಭಿಯಾನವನ್ನು ನಡೆಸುತ್ತಿರುವ ಅನಿರುದ್ದ ಹುಲೇಕಲ್ ಗ್ರಾಮ ಪಂಚಾಯತಿ ಕಟ್ಟಡದಿಂದ ಕೇವಲ ೨೦೦ ಮೀಟರ್ ದೂರದ ಸೋದೆ ಕ್ರಾಸ್ ನಲ್ಲಿ ಹಾಕಲಾದ ತ್ಯಾಜ್ಯಗಳ ಚಿತ್ರ ಹಾಗೂ ವಿಡಿಯೋ ತಮ್ಮ ಸಾಮಾಜಿಕ ಜಾಲ ತಾಣದ ಗೋಡೆಯಲ್ಲಿ ಹಾಕಿಕೊಂಡಿದ್ದಾರೆ.
ಅನಿರುದ್ದ ಅವರು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ಪೋಸ್ಟ ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಉದಯವಾಣಿ ಸಹಿತ ಹಲವು ಮಾಧ್ಯಮಗಳು ಇಲ್ಲಿನ ರಸ್ತೆ ಬದಿ ತ್ಯಾಜ್ಯಗಳ ಬಗ್ಗೆ ಬೆಳಕು ಚೆಲ್ಲಿದ್ದವು.
ಹುಲೇಕಲ್ ಮಾರ್ಗದ ಮೂಲಕವೇ ಸೋದೆ ಮಠ, ಸ್ವರ್ಣವಲ್ಲೀ ಮಠ, ಜೈನ ಮಠಗಳಿಗೆ ತೆರಳುವ ಮಾರ್ಗ ಇದೇ ಆಗಿದೆ. ಗಣೇಶಪಾಲ್, ಬಕ್ಕಳ ಬೊಟಾನಿಕಲ್ ಗಾರ್ಡನ್, ಶಿವಗಂಗಾ ಜಲಪಾತಗಳಿಗೂ ಪ್ರವಾಸಿಗರು, ಭಕ್ತಾದಿಗಳು ತೆರಳುವದು ಸಾಮಾನ್ಯ ಆಗಿದೆ.
ಗ್ರಾಮ ಪಂಚಾಯತಿ ಗ್ರಾಮ ತ್ಯಾಜ್ಯ ನಿರ್ವಹಣೆ ಮಾಡಬೇಕಿತ್ತು. ಆದರೆ, ಇದರ ನಿರ್ಲಕ್ಷ್ಯದಿಂದ ಸ್ಪೀಕರ್ ಕ್ಷೇತ್ರದ ಹೆಸರೂ ಸಾಮಾಜಿಕ ಜಾಲ ತಾಣದಲ್ಲಿ ಅಸಮಾಧಾನಕ್ಕೆ ಒಳಗಾಗುವಂತೆ ಮಾಡಿದೆ.
ಇದನ್ನೂ ಓದಿ : ಅಪ್ಪು ನೆನೆದು ಕಣ್ಣೀರು ಬೇಡ ಒಂದೊಂದು ಗಿಡ ನೆಡಿ: ರಾಘವೇಂದ್ರ ರಾಜ್‍ಕುಮಾರ್