Advertisement

ಖ್ಯಾತ ನಿರೂಪಕಿ ಕನುಪ್ರಿಯಾ ಕೋವಿಡ್ ಸೊಂಕಿನಿಂದ ಸಾವು!

08:30 AM May 03, 2021 | Team Udayavani |

ನವದೆಹಲಿ : ಖ್ಯಾತ ನಿರೂಪಕಿ, ನಟಿ ಕನುಪ್ರಿಯಾ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರು ಬ್ರಹ್ಮ ಕುಮಾರಿಸ್ ಮತ್ತು ಕರ್ಮಭೂಮಿ ಕಾರ್ಯಕ್ರಮಗಳನ್ನು  ನಡೆಸಿಕೊಡುತ್ತಿದ್ದರು. ಈ ಮೂಲಕ ಜನಪ್ರಿಯತೆ ಗಳಿಸಿದ್ದರು. ಇವರು ಕೇವಲ ನಿರೂಪಕಿಯಾಗಿ ಅಥವಾ ನಟಿಯಾಗಿ ಮಾತ್ರ ಹೆಸರು ಮಾಡಿರಲಿಲ್ಲ. ಬದಲಾಗಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು.

Advertisement

ಕನುಪ್ರಿಯಾ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ಕನುಪ್ರಿಯಾ ಸಹೋದರಿ ಬಿ.ಕೆ ಶಿವಾನಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.  ಕನು ಪ್ರಿಯಾ ಟಿವಿ ಕಾರ್ಯಕ್ರಮಗಳಾದ ಭನ್ವಾರ್, ಅನನ್ರೊ, ಕಹಿ ಏಕ್ ಗಾಂವ್, ಕಾರ್ತವ್ಯ, ಮೇರಿ ಕಹಾನಿ, ಟೆಸು ಕೆ ಫೂಲ್ ಮತ್ತು ತುಮ್ಹರಾ ಇಂತಿಜಾರ್ ಹೈಗಳಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಕಾನುಪ್ರಿಯಾ ನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸುಮಾರು 80 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next