Advertisement

ನಿರ್ಮಾಪಕ ಗುರು ದೇಶಪಾಂಡೆ ನನಗೆ ಅವಮಾನ ಮಾಡಿದ್ದಾರೆ: ನಟ ಅಜಯ್ ರಾವ್

04:00 PM Dec 25, 2021 | Team Udayavani |

ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ “ಲವ್ ಯೂ ರಚ್ಚು” ಡಿ.31ರಂದು ಬಿಡುಗಡೆ ಕಾಣುತ್ತಿದೆ. ಹಾಡುಗಳು, ಟ್ರೈಲರ್ ನಿಂದ ಕ್ರೇಜ್ ಹೆಚ್ಚಿಸಿದ್ದ ಚಿತ್ರ ಇದೀಗ ನಾಯಕ ನಟ ಮತ್ತು ನಿರ್ಮಾಪಕರ ಜಗಳದ ಕಾರಣದಿಂದಲೂ ಸುದ್ದಿಯಾಗುತ್ತಿದೆ.

Advertisement

ಇತ್ತೀಚೆಗೆ ನಡೆದ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಅಜಯ್ ರಾವ್ ಗೈರಾಗಿದ್ದರು. ಚಿತ್ರತಂಡದೊಂದಿಗೆ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲೂ ಅಜಯ್ ಕಾಣಿಸಿಕೊಂಡಿಲ್ಲ. ಇದರೊಂದಿಗೆ ನಿರ್ಮಾಪಕ ಗುರು ದೇಶಪಾಂಡೆ ಮತ್ತು ಅಜಯ್ ನಡವಿನ ಜಗಳದ ವಿಚಾರ ಎಲ್ಲರಿಗೂ ಗೊತ್ತಾಗಿತ್ತು.

ಇದನ್ನೂ ಓದಿ:ಕೂ- 2021ರ ಪ್ರಮುಖ ಕ್ಷಣಗಳು: ಅಗಲಿದ ಪುನೀತ್ ಹೆಚ್ಚು ಉಲ್ಲೇಖಗೊಂಡ ಸೆಲೆಬ್ರಿಟಿ

ಇದೀಗ ತಮ್ಮ ಮತ್ತು ನಿರ್ಮಾಪಕರ ಜಗಳದ ಕುರಿತಾಗಿ ಅಜಯ್ ಸುದ್ದಿಗೋಷ್ಠಿ ನಡೆಸಿದ್ದಾರೆ. “ನಿರ್ಮಾಪಕ ಗುರುದೇಶಪಾಂಡೆ ನನಗೆ ಅವಮಾನ ಮಾಡಿದ್ದಾರೆ. ಹೀಗಾಗಿ ನನಗೆ ಮರ್ಯಾದೆ ಸಿಗದ ಜಾಗದಲ್ಲಿ ನಾನು ಇರುವುದಿಲ್ಲ” ಎಂದಿದ್ದಾರೆ.

“ಗುರುದೇಶಪಾಂಡೆ ಅವರು ಈ ಚಿತ್ರಕ್ಕೆ ಬರುವ ಮೊದಲೇ ನಾನು ಚಿತ್ರವನ್ನು ಒಪ್ಪಿಕೊಂಡಿದ್ದೆ. ನಾನು ಬಂದ ಮೇಲೆ ಅವರು ಬಂದಿದ್ದು, ಅವರಿಗಿಂತ ನನಗೆ ಈ ಸಿನಿಮಾ ಮೇಲೆ ಹೆಚ್ಚು ಅಧಿಕಾರವಿದೆ. ನನಗೆ ಆದ ಅವಮಾನದ ಕಾರಣದಿಂದ ನಾನು ಸಿನಿಮಾದಿಂದ ದೂರವಿದ್ದೇನೆ. ನಾನು ಚಿತ್ರದ ನಾಯಕನಟನಾದ ಕಾರಣದಿಂದ ನಾನು ವೈಯಕ್ತಿಕವಾಗಿ ಪ್ರಚಾರ ಮಾಡುವುದಿಲ್ಲ” ಎಂದು ಅಜಯ್ ರಾವ್ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next