Advertisement

ಕೋವಿಡ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ

03:57 PM Mar 29, 2021 | Team Udayavani |

ಬಾಗಲಕೋಟೆ: ಕೋವಿಡ್‌-19 ಎರಡನೇಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ 73 ಸಕ್ರಿಯಪ್ರಕರಣಗಳು ಇವೆ. ಪ್ರಸ್ತುತ ಜಿಲ್ಲೆಯಲ್ಲಿ 73 ಸಕ್ರಿಯ ಪ್ರಕರಣಗಳಲ್ಲಿ 8 ಜಿಲ್ಲಾ ಆಸ್ಪತ್ರೆಯಲ್ಲಿ,5 ಪಾಟೀಲ್‌ ಮೆಡಿಕೇರ್‌ದಲ್ಲಿ ಹಾಗೂ 1 ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂಳಿದ 59 ರೋಗಿಗಳು ಹೋಮ್‌ ಐಸೋಲೇಶನ್‌ ನಲ್ಲಿದ್ದಾರೆ ಎಂದರು.

ಕಳೆದ 15 ದಿನಗಳಲ್ಲಿ ಒಟ್ಟು 37167ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ101 -ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ.36 ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ7 ದಿನಗಳಲ್ಲಿ ಒಟ್ಟು 25015 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 77 ಪಾಸಿಟಿವ್‌ಪ್ರಕರಣಗಳು ಕಂಡುಬಂದಿರುತ್ತವೆ. 27ರೋಗಿಗಳು ಗುಣಮುಖರಾಗಿರುತ್ತಾರೆ.ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲಎಂದು ಹೇಳಿದರು. ಮಹಾರಾಷ್ಟ್ರ ರಾಜ್ಯದಿಂದಆಗಮಿಸುವ ಸಾರ್ವಜನಿಕರಿಗೆ ಆರ್ಟಿಪಿಸಿಆರ್‌ ನೆಗೆಟಿವ್‌ ಪರೀûಾ ವರದಿಯನ್ನು ಕಡ್ಡಾಯಗೊಳಿಸಲಾಗಿದ್ದು, ಸದರಿ ನಿಯಮಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆನೀಡಲಾಗುತ್ತಿದೆ. ಕೋವಿಡ್‌ -19 ನಿಯಂತ್ರಣಕ್ಕೆ ಅಗತ್ಯ ಕ್ರಮಗಳಾದ ಮಾಸ್ಕ್ ಧರಿಸುವುದು,ದೈಹಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ.ಗುಂಪು ಗುಂಪಾಗಿ ಸಾರ್ವಜನಿಕರು ಸೇರದಂತೆತಿಳಿವಳಿಕೆ ಹಾಗೂ ಮಾಸ್ಕ್ ಧರಿಸದೇ ಇದ್ದಲ್ಲಿ ನಗರಪ್ರದೇಶದಲ್ಲಿ 250 ರೂ. ಹಾಗೂ ಗ್ರಾಮೀಣಪ್ರದೇಶಗಳಲ್ಲಿ 100 ರೂ. ದಂಡ ವಿಧಿ ಸಲುಪಂಚಾಯತ್‌ ವ್ಯಾಪ್ತಿಯಲ್ಲಿ ತಂಡ ರಚಿಸಲು ಆದೇಶ ಮಾಡಲಾಗಿದೆ ಎಂದರು.

ಜಿಲ್ಲಾ ಆಸ್ಪತ್ರೆ ಬಾಗಲಕೋಟೆಯನ್ನು ಕೋವಿಡ್‌ ಆಸ್ಪತ್ರೆ ಎಂದು ಘೋಷಿಸಿದ್ದು, 400ಹಾಸಿಗೆಗಳು 33 ವೆಂಟಿಲೇಟರ್‌ಗಳು, 40ಐಸಿಯು ಹಾಸಿಗೆ ಹಾಗೂ 270 ಆಕ್ಸಿಜನ್‌ ಪೂರೈಕೆಹೊಂದಿದ ಹಾಸಿಗೆಗಳ ಸೌಲಭ್ಯವಿದೆ. ತಂಡಗಳನ್ನುರಚಿಸಲು ಸಾಂಸ್ಥಿಕ ಕ್ವಾರಂಟೈನ್‌ಗಾಗಿ ಈಗಾಗಲೇವಸತಿ ನಿಲಯಗಳನ್ನು ಗುರುತಿಸಲಾಗಿದೆ.ಕೋವಿಡ್‌ -19 ನಿಯಂತ್ರಣಕ್ಕಾಗಿ ನಗರ ಹಾಗೂಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿ ಕರಿಗೆ ಜಾಗೃತಿ ಮೂಡಿಸಲು ಅದೇಶಿಸಿದೆ. ಕೋವಿಡ್‌ -19ಪ್ರಕರಣಗಳು ಹೆಚ್ಚಾದ ಪ್ರದೇಶಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಂಟೈನಮೆಂಟ್‌ಜೋನ್‌ಗಳನ್ನು ರಚಿಸಿ ಸದರಿ ಪ್ರದೇಶದ ಮೇಲುಸ್ತುವಾರಿಗಾಗಿ ಇನ್ಸಿಡೆಂಟ್‌ ಕಮಾಂಡರ್‌ಗಳನ್ನು ನೇಮಕ ಮಾಡಿ ಸೂಕ್ತ ಕ್ರಮ ಕೈಗೊಳ್ಳಲುಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next