Advertisement

ಪೊಲೀಸ ರಿಂದ ದಯಾನಿಧಿ ಬಿಡಿಸಿ ಪ್ರತಿಭಟಿಸಿದ ಕಾರ್ಯಕರ್ತರು

01:45 PM Jan 11, 2018 | |

ಗುಂಡ್ಲುಪೇಟೆ: ಚಾಮರಾಜನಗರ ತಾಲೂಕಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣ ವಿರೋಧಿಸಿದ ಚಾಮರಾಜನಗರ ತಾಪಂ ಉಪಾಧ್ಯಕ್ಷ ದಯಾ ನಿಧಿಯನ್ನು ವಶಕ್ಕೆ ಪಡೆದು ಪಟ್ಟಣಕ್ಕೆ ಕರೆತಂದಾಗ ಅವರು ಬಿಡಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಚಾನಗರ ತಾಪಂ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ದಯಾನಿಧಿಯನ್ನು ವೇದಿಕೆಯಿಂದ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ಯದೆ ಪಟ್ಟಣದಲ್ಲಿನ ಪ್ರವಾಸಿಮಂದಿರಕ್ಕೆ ಕರೆ ತಂದಿದ್ದರು. ಈ ವಿಷಯವನ್ನು ಅರಿತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಎಸ್‌.ನಿರಂಜನಕುಮಾರ್‌ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರವಾಸಿ ಮಂದಿರಕ್ಕೆ ಮುತ್ತಿಗೆ ಹಾಕಿದರು. 

ದಯಾನಿಧಿಯನ್ನು ಅಕ್ರಮವಾಗಿ ಬಂಧಿಸಿದ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಗಲಿಬಿಲಿಗೊಂಡ ತೆರಕಣಾಂಬಿ ಠಾಣೆಯ ಪಿಎಸ್‌ಐ ರವಿಕಿರಣ್‌ ಹಾಗೂ ಸಿಬ್ಬಂದಿ ದಯಾನಿಧಿಯನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ.

ಊಟ ನೀರು ಕೊಡಲಿಲ್ಲ: ನಂತರ ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದಯಾನಿಧಿ, ಸಾಧನಾ ಸಮಾವೇಶದಲ್ಲಿ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿ, ಅದನ್ನು ಬಿಟ್ಟು ಮೋದಿ, ಯಡಿಯೂರಪ್ಪ
ವಿರುದ್ಧ ಮಾತು ಬೇಡ ಎಂದು ಪ್ರತಿಭಟಿಸಿದೆ. 

ಇದಕ್ಕೆ ವೇದಿಕೆಯಲ್ಲಿದ್ದ ತನ್ನನ್ನು ಬಲವಂತವಾಗಿ ಎಳೆದೊಯ್ದು ಬೆಳಗಿನಿಂದ ಅಲ್ಲಿ ಇಲ್ಲಿ ಸುತ್ತಾಡಿಸಿದ ಪೊಲೀಸರು, ಮೊಬೈಲ್‌ ಕಸಿದುಕೊಂಡು ಹಸಿವು ಹಾಗೂ ಬಾಯಾರಿಕೆಯಾಗುತ್ತಿದೆ ಎಂದರೂ ಊಟ ಹಾಗೂ ನೀರನ್ನೂ ಕೊಡದೆ ತೀವ್ರ ಹಸಿವಿನಿಂದ ಬಳಲುವಂತೆ ಮಾಡಿದರು. ಈ ಬಗ್ಗೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ನಂತರ ಗುಂಡ್ಲುಪೇಟೆಗೆ ಕರೆತಂದರು ಎಂದು ಹೇಳಿದರು.

Advertisement

ಈ ವಿಷಯ ತಿಳಿದು ಪಕ್ಷದ ಕಾರ್ಯಕರ್ತರು ತಮ್ಮನ್ನು ಬಿಡಿಸಿದ್ದಾರೆ. ಉಗ್ರಗಾಮಿಗಳಿಗೆ ಹಾಗೂ ಕೊಲೆಗಡುಕರಿಗೆ ರಕ್ಷಣೆ ನೀಡುವ ರಾಜ್ಯ ಸರ್ಕಾರವು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ
ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಂತರ ತಾಲೂಕು ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ದಮನಕಾರಿ ನೀತಿ ಹಾಗೂ ಆಡಳಿತ ಯಂತ್ರದ ದುರ್ಬಳಕೆ ವಿರುದ್ಧ ಘೋಷಣೆ ಕೂಗಿ ಕೆಲಕಾಲ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಸಿ.ಎಸ್‌. ನಿರಂಜನಕುಮಾರ್‌, ಮಂಡಲಾಧ್ಯಕ್ಷ ಎಲ್‌.ಸುರೇಶ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್‌, ಮುಖಂಡರಾದ ಪ್ರಭಾಕರ್‌, ಜಿ.ಜಿ.ಶಶಿಕಾಂತ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next