Advertisement

ಕೊರೊನಾ ವೈರಸ್; ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಟೀಕಿಸಿದ ಸಾಮಾಜಿಕ ಹೋರಾಟಗಾರನ ಬಂಧನ

10:10 PM Mar 20, 2020 | Nagendra Trasi |

ಬೀಜಿಂಗ್: ಕೊರೊನಾ ವೈರಸ್ ತಡೆಗಟ್ಟುವಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಆಡಳಿತ ವೈಫಲ್ಯವಾಗಿದೆ ಎಂದು ಕಟುವಾಗಿ ಟೀಕಿಸಿ ತಲೆಮರೆಯಿಸಿಕೊಂಡಿದ್ದ ಪ್ರಮುಖ ಸಾಮಾಜಿಕ ಕಾರ್ಯಕರ್ತನನ್ನು ಚೀನಾ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ಡಿಸೆಂಬರ್ ನಿಂದ ತಲೆಮರೆಯಿಸಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕ್ಸೂ ಝಿಯೋಂಗ್ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ತಿಳಿಸಿದೆ.

2012ರಲ್ಲಿ ಕ್ಸಿ ಜಿನ್ ಪಿಂಗ್ ಅಧಿಕಾರದ ಗದ್ದುಗೆ ಏರಿದ ಬಳಿಕ ಚೀನಾದ ಆಡಳಿತರೂಢ ಕಮ್ಯೂನಿಷ್ಟ್ ಪಕ್ಷ ನಾಗರಿಕ ಹಕ್ಕುಗಳನ್ನು ತೀವ್ರವಾಗಿ ಹತ್ತಿಕ್ಕುತ್ತಿದೆ. ಬಲಪಂಥೀಯ ವಕೀಲರು, ಕಾರ್ಮಿಕ ಕಾರ್ಯಕರ್ತರು ಹಾಗೂ ಮಾರ್ಕಿಸ್ಟ್ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ಚೀನಾದ ವುಹಾನ್ ನಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಎಚ್ಚರಿಸಿದ್ದ ವೈದ್ಯರೊಬ್ಬರನ್ನು ಪೊಲೀಸರು ಸುಳ್ಳು ಸುದ್ದಿ ಹಬ್ಬಿಸುವ ಆರೋಪದ ಮೇಲೆ ಬಂಧಿಸಿದ್ದರು. 34 ವರ್ಷದ ವೈದ್ಯ ಲೀ ವೆನ್ ಲಿಯಾಂಗ್ ಸಾವನ್ನಪ್ಪಿದ್ದ ಬಳಿಕ ಚೀನಾದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ರಾಜಕೀಯ ಬದಲಾವಣೆ ಬಗ್ಗೆ ದೊಡ್ಡ ಮಟ್ಟದ ಜನಾಂದೋಲನ ಪ್ರಾರಂಭವಾಗಿರುವುದಾಗಿ ವರದಿ ವಿವರಿಸಿದೆ.

ಕೊರೊನಾ ವೈರಸ್ ಬಗ್ಗೆ ಚೀನಾ ಕೈಗೊಂಡ ಕ್ರಮ ಹಾಗೂ ಆಡಳಿತ ವೈಫಲ್ಯದ ಬಗ್ಗೆ ಧ್ವನಿ ಎತ್ತುತ್ತಿರುವವರನ್ನು ಚೀನಾ ಸರ್ಕಾರ ಹತ್ತಿಕ್ಕಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಶೋಧಕ ಪ್ಯಾಟ್ರಿಕ್ ಪೂನ್ ಇ ಮೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಫೆ.4ರಂದು ಕ್ಸೂ ಲೇಖನವೊಂದನ್ನು ಬರೆದಿದ್ದರು. ಅಮೆರಿಕ, ಚೀನಾ ವ್ಯಾಪಾರ ಯುದ್ಧ, ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟ, ಕೊರೊನಾ ವೈರಸ್ ಬಗ್ಗೆ ಪ್ರಸ್ತಾಪಿಸಿ ಚೀನಾ ಅಧ್ಯಕ್ಷ ಕ್ಸಿ ಆಡಳಿತವನ್ನು ಕಟುವಾಗಿ ಟೀಕಿಸಿ, ಅಧಿಕಾರದಿಂದ ಕೆಳಗಿಳಿಯುವಂತೆ ಕರೆ ಕೊಟ್ಟಿದ್ದರು. ಈ ಲೇಖನ ಪ್ರಕಟವಾದ ನಂತರ ಚೀನಾ ಪೊಲೀಸರು ಕ್ಸೂ ಅವರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next