Advertisement
ರವಿವಾರ ಮಧ್ಯಾಹ್ನ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಶೇ.75ರಷ್ಟು ಸಿಡಿ ತಂತ್ರಗಾರಿಕೆಗೆ ಬಲಿಯಾಗಿದ್ದಾರೆ. ಈ ವಿಷಯದಲ್ಲಿ ಅವರೆಲ್ಲ ಮುಗ್ಧರು ಎಂದರು.
Related Articles
Advertisement
ಇದನ್ನೂ ಓದಿ: ಐಪಿಎಲ್ 2021ಕ್ಕೆ ಮುಹೂರ್ತ ನಿಗದಿ: 6 ನಗರದಲ್ಲಿ ನಡೆಯಲಿದೆ ಕೂಟ, ಸಂಪೂರ್ಣ ವೇಳಾಪಟ್ಟಿ
ಎಚ್ಡಿಕೆ ಎಚ್ಚರಿಕೆಯಿಂದ ಮಾತನಾಡಲಿ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳು ಏಳು ಜನ ಇದ್ದಾರೆ. ಅದರಲ್ಲಿ ಒಬ್ಬರು ಪದೇ ಪದೇ ವಯಾನಾಡಿಗೆ ಹೋಗುತ್ತಾರೆ ಎಂದು ನಾನು ಹೇಳಿದ್ದು ನಿಜ. ಆದರೆ, ಕುಂಬಳಕಾಯಿ ಕಳ್ಳ ಅಂದರೆ ಕುಮಾರಸ್ವಾಮಿ ಯಾಕೆ, ಹೆಗಲು ಮುಟ್ಟಿಕೊಳ್ಳಬೇಕು. ಇನ್ನೂ ಆರು ಜನ ಸಿಎಂಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕುಮಾರಸ್ವಾಮಿ ಮಾತ್ರ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಹೋರಾಟಗಾರರು ಎಂದರೆ ಕೇವಲವಾಗಿ ಕಾಣಬೇಡಿ. ಗೌರವದಿಂದ ಮಾತನಾಡಬೇಕು. ನಾನು ಮಾಜಿ ಮುಖ್ಯಮಂತ್ರಿಗಳು ಎಂದು ಗೌರವದಿಂದ ಕರೆದಿದ್ದೇನೆ. ಆದರೆ, ಕುಮಾರಸ್ವಾಮಿ, ಬಂಧಿಸಬೇಕು, ಎರೋಪ್ಲೇನ್ ಹತ್ತಿಸಬೇಕೆಂದು ಹೇಳಿದ್ದಾರೆ. ನಾವೇನು ಚಿತ್ರ ನಟಿಯನ್ನು ಮದುವೆಯಾಗಿಲ್ಲ. ಬಳಿಕ ನಟಿಯನ್ನು ಕೈಬಿಟ್ಟು ಬೇರೊಬ್ಬರನ್ನು ಮದುವೆಯಾಗಿಲ್ಲ. ಹೋರಾಟಗಾರರೆಂದರೆ ಏನು ಎಂದು ತೋರಿಸುತ್ತೇವೆ ಎಂದು ಹೇಳಿದರು.