ಮಹಾನಗರ: ನೆಹರೂ ಯುವ ಕೇಂದ್ರ ಮಂಗಳೂರು, ಮಿಹಿಕಾಸ್ ಕ್ರಿಯೇಟಿವ್ ಡ್ರಾಯಿಂಗ್ ಕ್ಲಾಸ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್‌ಪೇಟೆ ಅವರು, ವಾಯು ಮಾಲಿನ್ಯ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ, ಪ್ರಾಮುಖ್ಯ ಮತ್ತು ಜನರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿ, ಇಲಾಖೆಯಿಂದ ನಡೆಯುವ ಅಭಿಯಾನಗಳ ಮಾಹಿತಿ ನೀಡಿದರು. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಕ್ರಿಯರಾಗಿ ತೊಡಗಿ ಎಂದರು.
ಕಾರ್ಯಕ್ರಮದ ಆಯೋಜಕ ಮೆಹಿಕಾ ನಿಕೋಲ್ ಆರೊನ್ ಅವರು, ಪರಿಸರ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ ಬಗ್ಗೆ ವಿವರಿಸಿದರು.
ಮೀನುಗಾರಿಕಾ ವಿಶ್ವವಿದ್ಯಾನಿಲಯದ ಡಾ| ಎಸ್.ಎಂ. ಶಿವಪ್ರಕಾಶ್ ಅವರು ವಾಯು ಮಾಲಿನ್ಯದಿಂದ ಮನುಷ್ಯರ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ವಿವರಿಸಿದರು.
ಗಿಡ ನೆಡುವ ಅಭಿಯಾನ ನಡೆಯಲಿ ಪರಿಸರವಾದಿ ಜೀತ್ ಮಿಲನ್ ರಾಚ್ ಅವರು, ಪರಿಸರವನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭ ಮಾಡಬೇಕೆಂದು ಕರೆ ನೀಡಿದರು.
ಹಿರಿಯ ಚಿತ್ರ ಕಲಾಗಾರ ಗಣೇಶ್ ಸೋಮಯಾಜಿ, ಪ್ರಸಾದ್ ಆರ್ಟ್ ಗ್ಯಾಲರಿ ಮುಖ್ಯಸ್ಥ ಕೋಟಿ ಪ್ರಸಾದ್ ಆಳ್ವ , ವನ್ಯ ಜೀವಿ ಸಂರಕ್ಷಕ ಮಹೇಶ್, ಡಾ| ಎಂ.ವಿ. ಶೆಟ್ಟಿ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ್ ಟ್ರಸ್ಟಿ ಪ್ರೊಫೆಸರ್ ಡಾ| ಹಿಮಾ ಉರ್ಮಿಳ ಶೆಟ್ಟಿ, ನೆಹರೂ ಯುವ ಕೇಂದ್ರ ಮಂಗಳೂರು ಮತ್ತು ಯು.ಎನ್.ವಿ. ಸ್ವಯಂ ಸೇವಕರಾದ ತಿಲಕ್ ಕುಮಾರ್, ನಿತಿನ್ ವಾಸ್, ರೀನಾ, ಅಂಕಿತಾ ಉಪಸ್ಥಿತರಿದ್ದರು. ಸೋನಿಯಾ ನಿಕೋಲ್ ಆರೊನ್ ನಿರೂಪಿಸಿದರು.
ಪರಿಸರ ಸಂರಕ್ಷಣೆಗೆ ಮುಂದಾಗಿ
ಪರಿಸರವಾದಿ ದಿನೇಶ ಹೊಳ್ಳ ಮಾತನಾಡಿ, ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗೆ ಯುವ ಜನತೆ ಮುಂದಾಗಬೇಕೆಂದರು.