Advertisement

ಕಾರ್ಯಪ್ರವೃತ್ತರಾಗಿ: ಆರೋಗ್ಯ ಇಲಾಖೆಗೆ ಶಾಸಕ ನಾೖಕ್‌ ಸೂಚನೆ

10:14 PM Mar 14, 2020 | mahesh |

ಬಂಟ್ವಾಳ: ಕೊರೊನಾ ವೈರಸ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಗತ್ಯವಾಗಿದ್ದು, ಈ ಕುರಿತು ಇಲಾಖೆ ಕಾರ್ಯಪ್ರವೃತವಾಗಬೇಕು. ಜತೆಗೆ ಇಲಾಖೆಗೆ ಸರಕಾರದಿಂದ ಬೇಕಿರುವ ವ್ಯವಸ್ಥೆ ಒದಗಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗಳಿಗೆ ತಿಳಿಸಿದರು.

Advertisement

ಶನಿವಾರ ಬಂಟ್ವಾಳ ತಾ| ಸಮುದಾಯ ಆಸ್ಪತ್ರೆಯಲ್ಲಿ ತಹಶೀಲ್ದಾರ್‌ ಸಹಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೊರೊನಾ ವೈರಸ್‌ ಕುರಿತು ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.

ತಾ| ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಮಾಹಿತಿ ನೀಡಿ, ಕೊರೊನಾ ವೈರಸ್‌ ಜಾಗೃತಿಗಾಗಿ ಈಗಾಗಲೇ ಗ್ರಾಮ ಮಟ್ಟ ದಲ್ಲಿ ಸಮಿತಿ ರಚನೆಯಾಗಿದೆ. ಜತೆಗೆ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡುವುದಕ್ಕೆ ಸಿದ್ಧತೆ ಗಳನ್ನೂ ನಡೆಸಲಾಗಿದೆ. ಭಯ ಬೇಡ, ಎಚ್ಚರ ಇರಲಿ ಎಂಬ ಮಾಹಿತಿಯನ್ನೊಳ ಗೊಂಡು ಕರಪತ್ರವನ್ನೂ ಹಂಚಲಾಗುತ್ತಿದೆ ಎಂದರು. ಜನರಲ್ಲಿ ಭಯ ಹುಟ್ಟಿಸದಂತೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳು ವಂತೆ ಶಾಸಕರು ತಿಳಿಸಿದರು. ಜನಸೇರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರ ಜಾಗೃತಿ ಮಾಡುವಂತೆ ಬೂಡ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸಲಹೆ ನೀಡಿದರು.

ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಸದಾಶಿವ್‌ ಮತ್ತಿತರರಿದ್ದರು. ಶಾಸಕ ರಾಜೇಶ್‌ ನಾೖಕ್‌ ಆಸ್ಪತ್ರೆಯ ವ್ಯವಸ್ಥೆಯ ಪರಿಶೀಲನೆ ನಡೆಸಿದರು.

ಸ್ವಯಂಪ್ರೇರಿತ ಪರೀಕ್ಷೆ
ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬಂದರೂ ಸ್ವಯಂಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳ ಬಹುದು. ಕೊರೊನಾ ಶಂಕಿತ ವ್ಯಕ್ತಿಗಳಿದ್ದರೆ ಸಮೀಪದ ಆಶಾ ಕಾರ್ಯಕರ್ತೆಯರೂ ಮಾಹಿತಿ ನೀಡಬಹುದು. ರೋಗಿಯ ಎಲ್ಲ ಮಾಹಿತಿಗಳನ್ನೂ ಇಲಾಖೆ ಗೌಪ್ಯವಾಗಿಡುತ್ತದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೊರೊನಾ ಹಿನ್ನೆಲೆಯಲ್ಲೇ 5 ಬೆಡ್‌ಗಳನ್ನು ಮೀಸಲಿರಿಸ ಲಾಗಿದೆ. ಈಗಾಗಲೇ ಒಬ್ಬರು ಬಂಟ್ವಾಳ ಆಸ್ಪತ್ರೆಯಲ್ಲಿದ್ದು ತೆರಳಿದ್ದಾರೆ. ಶಂಕಿತರ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ ಎಂದು ಆರೋಗ್ಯಾಧಿಕಾರಿ
ಡಾ| ದೀಪಾ ಪ್ರಭು ತಿಳಿಸಿದರು.

Advertisement

ವದಂತಿ ಬೇಡ
ಆಸ್ಪತ್ರೆಯವರು ರೋಗಿಗಳ ಜತೆ ವ್ಯವಹರಿಸುವ ಸಂದರ್ಭದಲ್ಲಿ ಎನ್‌ 95 ಮಾಸ್ಕ್ ಅಗತ್ಯವಿರುತ್ತದೆ. ಆದರೆ ಸಾರ್ವಜನಿಕರಿಗೆ ಇದು ಬೇಕಿಲ್ಲ. ಎಲ್ಲರಿಗೂ ಮಾಸ್ಕ್ ಬೇಕು ಎಂದು ವದಂತಿ ಹರಡಿದ ಹಿನ್ನೆಲೆಯಲ್ಲಿ ಅದು ದೊರೆಯುತ್ತಿಲ್ಲ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು. ಯಾವುದೇ ವದಂತಿಗಳಿಗೆ ಅವಕಾಶ ನೀಡಬಾರದು ಎಂದು ಶಾಸಕ ರಾಜೇಶ್‌ ನಾೖಕ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next