Advertisement

“ಸ್ವತ್ಛ ಭಾರತ್‌ ಪರಿಕಲ್ಪನೆ ಸಾಕಾರಕ್ಕೆ ಯುವ ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ’

10:03 PM Jul 14, 2019 | sudhir |

ಪಡುಬಿದ್ರಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವತ್ಛ ಭಾರತ್‌ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಯುವ ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ ಅತೀ ಅಗತ್ಯವಾಗಿದೆ ಎಂದು ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ ಹೇಳಿದರು.

Advertisement

ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ್‌ ಯೂತ್‌ ಎಫೈರ್ ಮತ್ತು ನ್ಪೋರ್ಟ್ಸ್, ಡಿಪಾರ್ಟ್‌ಮೆಂಟ್‌ ಆಫ್‌ ಡ್ರಿಂಕಿಂಗ್‌ ವಾಟರ್‌ ಮತ್ತು ಸ್ಯಾನಿಟರೀಸ್‌, ಮಿನಿಸ್ಟ್ರಿ ಆಫ್‌ ಜಲ್‌ ಶಕ್ತಿ ಸಂಯುಕ್ತ ಆಯೋಜನೆಯಲ್ಲಿ ರವಿವಾರದಂದು ಹೆಜಮಾಡಿ ಅಮಾವಾಸ್ಯೆ ಕರಿಯ ಬೀಚ್‌ನಲ್ಲಿ ಆರಂಭಗೊಂಡ 50 ಗಂಟೆಗಳ “ಸ್ವತ್ಛ ಭಾರತ್‌ ಸಮ್ಮರ್‌ ಇಂಟರ್ನ್ ಶಿಪ್‌ ಪ್ರೋಗ್ರಾಮ್‌-2019(2.0)’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕರಾವಳಿ ತೀರದ ಬೀಚ್‌ಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದ್ದು, ಕರಾವಳಿ ಭಾಗವನ್ನು ಬಯಲು ಶೌಚಾಲಯ ಮುಕ್ತಗೊಳಿಸಲು ಸ್ಥಳೀಯಾಡಳಿತದೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯ ಅತಿಥಿ ಪತ್ರಕರ್ತ ಹರೀಶ್‌ ಹೆಜ್ಮಾಡಿ ಕರೆ ನೀಡಿದರು.

ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ಥಳೀಯಾಡಳಿತದಿಂದ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಡುವ ಬಗ್ಗೆ ಶತ ಪ್ರಯತ್ನ ನಡೆಸಿದ್ದರೂ ಫಲ ನೀಡಿಲ್ಲ. ಈ ಬಗ್ಗೆ ಯುವ ಜನತೆ ಕಸ ಬಿಸಾಡುವವರನ್ನು ಗುರುತಿಸಿ ಮನವೊಲಿಸಬೇಕೆಂದು ವಿನಂತಿಸಿದರು.

ಹೆಜಮಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಸ್ಥಳೀಯಾಡಳಿತ ದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆಯಿತ್ತರು.

Advertisement

ಹಿರಿಯ ಮೀನುಗಾರ ಮುಖಂಡ ನಾರಾಯಣ ಕೆ. ಮೆಂಡನ್‌ ಮಟ್ಟುಪಟ್ಣ, ಗ್ರಾ.ಪಂ. ಸದಸ್ಯರಾದ ವಾಮನ ಕೋಟ್ಯಾನ್‌ ನಡಿಕುದ್ರು, ಪ್ರಾಣೇಶ್‌ ಹೆಜ್ಮಾಡಿ, ಸರಿನಾ ನ್ಯಾನ್ಸಿ ಅಲ್ಮೇಡಾ ಮತ್ತು ಸುರೇಖಾ ಹರೀಶ್‌ ಬಂಗೇರ, ಕರಾವಳಿ ಯುವಕ ವೃಂದದ ಅಧ್ಯಕ್ಷ ಅಶೋಕ್‌ ವಿ. ಕೆ., ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್‌, ಹೆಜಮಾಡಿ ಬೀಚ್‌ ಫ್ರೆಂಡ್ಸ್‌ ಅಧ್ಯಕ್ಷ ಯಾದವ ಕೋಟ್ಯಾನ್‌ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು ಸ್ವಾಗತಿಸಿ, ಜಿತೇಂದ್ರ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಶ್ರೇಯಸ್‌ ವಂದಿಸಿ ದರು. ಕಾರ್ಯಕ್ರಮವನ್ನು ಹೆಜಮಾಡಿಯ ಕರಾವಳಿ ಯುವಕ-ಯುವತಿ ವೃಂದ ಮತ್ತು ಉಡುಪಿ ನೆಹರೂ ಯುವ ಕೇಂದ್ರ ಸಂಯೋಜಿಸಿತು.

50 ಗಂಟೆಗಳ ಸಮಗ್ರ ಕಾರ್ಯಕ್ರಮ
ಕಾರ್ಯಕ್ರಮವು ಹೆಜಮಾಡಿ ಗ್ರಾಮದಲ್ಲಿ ಕರಾವಳಿ ಯುವಕ – ಯುವತಿ ವೃಂದದ ಉಸ್ತುವಾರಿಯಲ್ಲಿ ಜು. 15 ರಿಂದ ಆರಂಭಗೊಂಡು ಜು. 30ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹೆಜಮಾಡಿ ಬೀಚ್‌ ಸ್ವತ್ಛತೆ, ಗ್ರಾಮದ ಶಾಲೆಗಳ ವಠಾರದಲ್ಲಿ ಶ್ರಮದಾನ, ಸಾರ್ವಜನಿಕ ಶೌಚಾಲಯ ಸ್ವತ್ಛತೆ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ, ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸ್ವತ್ಛತಾ ನಡಿಗೆ, ಗ್ರಾಮದಾದ್ಯಂತ ವನ ಮಹೋತ್ಸವ, ಅವಶ್ಯವಿದ್ದಲ್ಲಿ ಇಂಗುಗುಂಡಿಗಳ ನಿರ್ಮಾಣ, ಸ್ಥಳೀಯಾಡಳಿತದ ಸಹಕಾರದೊಂದಿಗೆ ಮನೆ ಮನೆಗೆ ಸ್ವತ್ಛತಾ ಭೇಟಿ, ಗ್ರಾಮದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ವಿವಿಧ ಕಾರ್ಯಕ್ರಮಗಳು, ಕಸ ವಿಂಗಡಣೆೆ ಬಗ್ಗೆ ಸಾರ್ವಜನಿಕ ಮಾಹಿತಿ, ಬೀದಿ ಸ್ವತ್ಛತೆ ಕುರಿತು ಬೀದಿ ಫಲಕ ಅಳವಡಿಕೆ ಹಾಗೂ ಮುಖ್ಯವಾಗಿ ಹೆಜಮಾಡಿ ಬೀಚ್‌ ಸಹಿತ ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next